ಶಾಸಕ ಭರತ್ ಶೆಟ್ಟಿ ಕಳೆದ ಚುನಾವಣೆಯಲ್ಲಿ ನೀಡಿದ್ದ ಪ್ರಣಾಳಿಕೆಯನ್ನು ಕಾರ್ಯರೂಪಕ್ಕೆ ತಂದಿಲ್ಲ: ಕವಿತಾ ಸುನಿಲ್ ಆರೋಪ

ಸುರತ್ಕಲ್, ಮೇ 4: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ, ಶಾಸಕ ಭರತ್ ಶೆಟ್ಟಿ, ಕಳೆದ ಚುನಾವಣೆಯಲ್ಲಿ ನೀಡಿದ್ದ ಪ್ರಣಾಳಿಕೆಯನ್ನು ಕಾರ್ಯರೂಪಕ್ಕೆ ತರದೇ ಈ ಬಾರಿಯ ಚುನಾವಣೆಗೂ ಅದೇ ಭರವಸೆಗಳ ಪ್ರಣಾಳಿಕೆ ಮುದ್ರಿಸಿ ಮನೆಮನೆಗೂ ಹಂಚುತ್ತಿರುವುದು ವಿಪರ್ಯಾಸ ಎಂದು ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ನಾಯಕಿ ಕವಿತಾ ಸುನಿಲ್ ಕುಟುಕಿದ್ದಾರೆ.
ಗುರುವಾರ ಹೊಸಬೆಟ್ಟುವಿನಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಪೂರೈಸಲಾಗದ ಶಾಸಕ ಭರತ್ ಶೆಟ್ಟಿ ಈ ಬಾರಿಯ ಚುನಾವಣೆಯಲ್ಲೂ ಅದೇ ಭರವಸೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅವರ ಈ ಬಾರಿಯ ಚುನಾವಣಾ ಪ್ರಣಾಳಿಕೆಯೇ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ಪಷ್ಟವಾಗಿ ತಿಳಿಸುತ್ತಿದೆ ಎಂದು ಕಿಡಿಕಾರಿದರು.
ವಿಪರ್ಯಾಸವೆಂದರೆ ಅವರು ಕಳೆದ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು, ಆದರೆ ಐದು ವರ್ಷಗಳಿಂದ ಒಂದು ಸರಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿಯಲಾಗಿಲ್ಲ. ಮತ್ತೆ ಅದನ್ನೇ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರ ಆಲೋಚನೆಯ ಐಟಿ ಪಾರ್ಕ್ ಕಳೆದ ಬಾರಿ ಕಾರ್ಯರೂಪಕ್ಕೆ ತರಲು ಮುಂದಾಗಿದ್ದರು ಅದನ್ನು ಸರಕಾರ ನಿರ್ಭಂಧಿಸಿತ್ತು. ಅವರ ಪಾರ್ಕ್ನ ಮಾದರಿ ಹೇಗೆ ತಿಂದರೆ ಕೇಳ ಅಂತಸ್ತಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಅದರ ಮೇಲೆ ನಿರ್ಮಾಣದ ಯೋಜನೆ ಹಾಕಿದ್ದರು ಜನರ ಉದ್ಧಾರಕ್ಕಿಂತಲೂ ಮಾರ್ವಾಡಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿತ್ತು ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಉಮೇಶ್ ದಂಡಕೇರಿ, ಕಾರ್ಪೊರೇಟರ್ ಅನಿಲ್ ಕುಮಾರ್, ದೀಪಕ್ ಪೂಜಾರಿ ಸೇರಿದಂತೆ ಕಾಂಗ್ರೆಸ್ ನ ಬಿಲ್ಲವ ನಾಯಕರು ಉಪಸ್ಥಿತರಿದ್ದರು.
"ರೋಡು ತೋಡು ನಿರ್ಮಾಣ ಮಾಡಿರುವುದು ಮಾತ್ರ ನಮ್ಮ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರ ಅಭಿವೃದ್ಧಿ ಈ ಅಭಿವೃದ್ಧಿ ಮಾಡಲು ಶಾಸಕರೇ ಬೇಕಾಗಿಲ್ಲ ಕಾರ್ಪೊರೇಟರ್ ಗಳು ಸಾಕು. ಅವರ ಕಳೆದ ಬಾರಿ ಚುನಾವಣೆಯ ಸಂದರ್ಭ ನೀಡಿದ್ದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಎಷ್ಟು ಈಡೇರಿಸ ಲಾಗಿದೆ ಎಂಬ ಕುರಿತು ಭರತ್ ಶೆಟ್ಟಿ ಅವರು ಚರ್ಚೆಗೆ ಬರಲಿ" ಎಂದು ಕವಿತಾ ಸನಿಲ್ ಸವಾಲು ಹಾಕಿದರು.







