ಬಿಹಾರ: ಜಾತಿಯಾಧಾರಿತ ಗಣತಿಗೆ ಪಾಟ್ನಾ ಹೈಕೋರ್ಟ್ನಿಂದ ತಡೆ
ಪಾಟ್ನಾ,ಮೇ 4: ಬಿಹಾರದಲ್ಲಿಯ ಜಾತಿ ಆಧಾರಿತ ಗಣತಿಗೆ ಪಾಟ್ನಾ ಉಚ್ಚನ್ಯಾಯಾಲಯವು ಗುರುವಾರ ತಡೆಯನ್ನು ನೀಡಿದೆ.
ಇದಕ್ಕೂ ಮುನ್ನ ಬೆಳಿಗ್ಗೆ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಅವರು,ತನ್ನ ಸರಕಾರವು ರಾಜ್ಯದಲ್ಲಿ ನಡೆಸುತ್ತಿರುವ ಜಾತಿಗಣತಿಗೆ ವಿರೋಧ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಜನಗಣತಿಯ ಭಾಗವಾಗಿ ಜಾತಿ ಆಧಾರಿತ ಗಣತಿಯನ್ನು ನಡೆಸಬೇಕೆಂದು ಕೇಂದ್ರಕ್ಕೆ ಪದೇ ಪದೇ ಮಾಡಿಕೊಂಡಿದ್ದ ಮನವಿಗಳು ತಿರಸ್ಕರಿಸಲ್ಪಟ್ಟ ಬಳಿಕ ನಿತೀಶ ಗಣತಿಗೆ ಆದೇಶಿಸಿದ್ದರು.
‘ಜಾತಿಗಣತಿಯಿಂದ ಜನರಿಗೇಕೆ ಸಮಸ್ಯೆಯಾಗಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಹಿಂದಿನ ಬಾರಿ 1931ರಲ್ಲಿ ಜಾತಿಗಣತಿಯನ್ನು ನಡೆಸಲಾಗಿತ್ತು. ಈಗ ಖಂಡಿತವಾಗಿಯೂ ಹೊಸ ಅಂದಾಜುಗಳು ನಮ್ಮ ಬಳಿಯಿವೆ. ಹೇಗಿದ್ದರೂ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯು ಅಲ್ಪಸಂಖ್ಯಾತರು,ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆಯಾ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ ’ ಎಂದು ಹೇಳಿದ ನಿತೀಶ,ಎಲ್ಲ ರಾಜಕೀಯ ಗುಂಪುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಯೇ ಜಾತಿ ಗಣತಿಗೆ ಆದೇಶಿಸಲಾಗಿತ್ತು ಎಂದರು.