ಸಿಪಿಐ (ಮಾವೋವಾದಿ) ಪಿತೂರಿ ಪ್ರಕರಣ: ಬಿಹಾರ, ಜಾರ್ಖಂಡ್ ಗಳಲ್ಲಿ ಎನ್ಐಎ ದಾಳಿ
ಹೊಸದಿಲ್ಲಿ,ಮೇ 4: ಸಿಪಿಐ (ಮಾವೋವಾದಿ) ಪಕ್ಷದ ಕಾರ್ಯಕರ್ತರು,ಬೆಂಬಲಿಗರು ಮತ್ತು ಸಹವರ್ತಿಗಳ ವಿರುದ್ಧ ತನ್ನ ಕಾರ್ಯಾಚರಣೆಯ ಭಾಗವಾಗಿ ಎನ್ಐಎ ಗುರುವಾರ ಬಿಹಾರ ಮತ್ತು ಜಾರ್ಖಂಡ್ನಾದ್ಯಂತ 14 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧಿಸಿದೆ.
ವಿಸ್ಥಾಪನ ವಿರೋಧಿ ಜನ ವಿಕಾಸ ಆಂದೋಲನದ ರಾಂಚಿ ಕಚೇರಿ ಸೇರಿದಂತೆ ಜಾರ್ಖಂಡ್ನ ಎಂಟು ಸ್ಥಳಗಳಲ್ಲಿ ಮತ್ತು ಬಿಹಾರದ ಗಯಾ,ಖಗರಿಯಾ ಮತ್ತು ಔರಂಗಾಬಾದ್ನ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.
ನಿಷೇಧಿತ ಸಂಘಟನೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಆಕ್ಷೇಪಾರ್ಹ ದಾಖಲೆಗಳು,ಹಲವಾರು ಮೊಬೈಲ್ ಫೋನ್ಗಳು,ಡಿವಿಡಿ ಡಿಸ್ಕ್ಗಳು ಇತ್ಯಾದಿಗಳನ್ನು ಎನ್ಡಿಎ ವಶಪಡಿಸಿಕೊಂಡಿದೆ.
ಬಿಹಾರ,ಜಾರ್ಖಂಡ್ ಹಾಗೂ ಛತ್ತೀಸ್ಗಡ ಸೇರಿದಂತೆ ಇತರ ರಾಜ್ಯಗಳಲ್ಲಿ ಸಂಘಟನೆಯ ಸಿದ್ಧಾಂತವನ್ನು ಹರಡಲು ಒಳಸಂಚು ರೂಪಿಸಿದ್ದ ಆರೋಪದಲ್ಲಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಸಿಪಿಐ (ಮಾವೋವಾದಿ) ಪಾಲಿಟ್ಬ್ಯೂರೋ ಮತ್ತು ಕೇಂದ್ರ ಸಮಿತಿ ಸದಸ್ಯರ ವಿರುದ್ಧ 2022,ಎಪ್ರಿಲ್ನಲ್ಲಿ ಎನ್ಐಎ ಪ್ರಕರಣವನ್ನು ದಾಖಲಿಸಿತ್ತು.
Next Story