ಹೆಣ್ಣು ಸಿಗದ ಯುವಕರಿಗೆ ಮದುವೆ ಭಾಗ್ಯ: ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆಯಲ್ಲಿ ಭರವಸೆ!

ಬೆಂಗಳೂರು: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ವಿವಿಧ ಪಕ್ಷಗಳು ಕಸರತ್ತು ನಡೆಸುತ್ತಿವೆ.
ಈ ನಡುವೆ ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ತನ್ನ ಪ್ರಣಾಳಿಕೆಯಲ್ಲಿ ವಧು-ವರರ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ.
''ಅರಭಾವಿ ಕ್ಷೇತ್ರದ ಮದುವೆಯಾಗದ ಹೆಣ್ಣು ಸಿಗದ ಯುವಕರಿಗೆ ಮದುವೆ ಮಾಡಿಸಲಾಗುವುದು. ವಧು-ವರರ ಮದುವೆ ಭಾಗ್ಯ ಯೋಜನೆ 2023 ಗ್ಯಾರಂಟಿ 100%'' ಎಂದು ಅರಭಾವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.
ಜೊತಗೆ ಶ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಸೇರಿ ಹಲವು ಭರವಸೆಗಳು ಇವರ ಪ್ರಣಾಳಿಕೆಯಲ್ಲಿದೆ.
ಸದ್ಯ ಪಕ್ಷೇತರ ಅಭ್ಯರ್ಥಿಯ ಈ ಪ್ರಣಾಳಿಕೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Next Story