'ದಿ ಕೇರಳ ಸ್ಟೋರಿ' ಇಂದು ಬಿಡುಗಡೆ: ವಿವಿಧ ಅರ್ಜಿಗಳ ವಿಚಾರಣೆ ನಡೆಸಲಿರುವ ಹೈಕೋರ್ಟ್
ಕೊಚ್ಚಿ: ವಿವಾದಾತ್ಮಕ 'ದಿ ಕೇರಳ ಸ್ಟೋರಿ' ಸಿನೆಮಾ ಸೆನ್ಸಾರ್ ಮಂಡಳಿ ಸೂಚಿಸಿದ ಏಳು ಬದಲಾವಣೆಗಳೊಂದಿಗೆ ಇಂದು ಬಿಡುಗಡೆಯಾಗಿದ್ದು, ಕೇರಳದಲ್ಲಿ ಮೊದಲ ದಿನ 21 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಕೇರಳದ 3,2000 ಮಹಿಳೆಯರು ಐಸಿಸ್ ಸೇರಲು ಸಿರಿಯಾಕ್ಕೆ ಹೋಗಿದ್ದಾರೆಂಬ ಪ್ರತಿಪಾದನೆಯ ಚಿತ್ರವನ್ನು, ವ್ಯಾಪಕ ಟೀಕೆಯ ನಂತರ ಮೂವರು ಮಹಿಳೆಯರು ಎಂದು ಚಿತ್ರತಂಡ ತಿದ್ದಿಕೊಂಡಿದೆ.
ಕೇರಳವನ್ನು ಅವಮಾನಿಸುವ ಸಂಘ ಪರಿವಾರದ ಅಪಪ್ರಚಾರವನ್ನು ಪ್ರಚುರಪಡಿಸುವ ಕೆಲಸ ಈ ಸಿನೆಮಾ ಮಾಡುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದರು.
ಶುಕ್ರವಾರ ಬಿಡುಗಡೆಯಾಗಿರುವ ಚಿತ್ರದ ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳನ್ನು ಕೇರಳ ಹೈಕೋರ್ಟ್ ಇಂದು ಪರಿಗಣಿಸಲಿದೆ ಎಂದು ವರದಿಯಾಗಿದೆ.
Next Story