ಖ್ಯಾತ ಬೈಕ್ ಸವಾರ, ಯೂಟ್ಯೂಬರ್ ಅಗಸ್ತ್ಯ ಚೌಹಾಣ್ ರಸ್ತೆ ಅಪಘಾತದಲ್ಲಿ ಮೃತ್ಯು
ಹೊಸದಿಲ್ಲಿ: ಪ್ರಖ್ಯಾತ ಬೈಕ್ ಸವಾರ ಹಾಗೂ ಯೂಟ್ಯೂಬರ್ ಅಗಸ್ತ್ಯ ಚೌಹಾಣ್ ತಮ್ಮ ಬೈಕನ್ನು ಗಂಟೆಗೆ 300 ಕಿಮೀ ವೇಗದಲ್ಲಿ ಚಲಾಯಿಸುವಾಗ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಯೂಟ್ಯೂಬ್ನಲ್ಲಿ 12 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಅಗಸ್ತ್ಯ, ಆಗ್ರಾದಿಂದ ದಿಲ್ಲಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಯಮುನಾ ಎಕ್ಸ್ಪ್ರೆಸ್ನ 47 ಕಿಮೀ ಮೈಲಿಗಲ್ಲು ಬಳಿ ಈ ಘಟನೆ ನಡೆದಿದೆ.
25 ವರ್ಷ ವಯಸ್ಸಿನ ಅಗಸ್ತ್ಯ ಡೆಹ್ರಾಡೂನ್ನ ನಿವಾಸಿಯಾಗಿದ್ದು, ತಮ್ಮಿಷ್ಟದ ಬೈಕ್ ಸವಾರಿ ಹಾಗೂ ಸಾಹಸವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅಲ್ಲಿ ಅವರಿಗೆ ದೊಡ್ಡ ಪ್ರಮಾಣದ ಅಭಿಮಾನಿಗಳಿದ್ದರು. ಅವರ ಅಕಾಲಿಕ ಮೃತ್ಯುವಿನಿಂದ ಅವರ ಲಕ್ಷಾಂತರ ಅಭಿಮಾನಿಗಳು ಆಘಾತಗೊಂಡಿದ್ದಾರೆ.
ವರದಿಗಳ ಪ್ರಕಾರ, ಅವರ ಬೈಕ್ ರಸ್ತೆ ವಿಭಜಕಕ್ಕೆ ಗುದ್ದಿ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗ್ರೇಟರ್ ನೊಯ್ಡಾದ ಜೇವರ್ನಲ್ಲಿರುವ ಕೈಲಾಶ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.