ರಶ್ಯದ ತೈಲ ಸ್ಥಾವರದ ಮೇಲೆ ಡ್ರೋನ್ ದಾಳಿ: ಭಾರೀ ಬೆಂಕಿ ಅನಾಹುತ
ಉಕ್ರೇನ್ ಕೃತ್ಯದ ಶಂಕೆ

ಉಕ್ರೇನ್ ಕೃತ್ಯದ ಶಂಕೆ
ಮಾಸ್ಕೊ,ಮೇ 5: ದಕ್ಷಿಣ ರಶ್ಯದ ಇಲ್‌ಸ್ಕಿ ತೈಲ ಸಂಸ್ಕರಣಾಗಾರದ ಮೇಲೆ ಶುಕ್ರವಾರ ಡ್ರೋನ್ ದಾಳಿ ನಡೆದಿದ್ದು, ಭಾರೀ ಅಗ್ನಿಅನಾಹುತವುಂಟಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲವೆಂದು ತಾಸ್ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ಡ್ರೋನ್ ದಾಳಿಯಲ್ಲಿ ತೈಲಸಂಸ್ಕರಣಾಗಾರದ 10.8 ಲಕ್ಷ ಟನ್ ಸಂಸ್ಕರಣಾ ಸಾಮರ್ಥ್ಯದ ಸಿಡಿಯು-5 ಘಟಕದ ಏರಿಯಲ್ ಕೂಲರ್ ಹಾನಿಗೀಡಾಗಿದೆ ಎಂದು ವರದಿ ತಿಳಿಸಿದೆ. ಶುಕ್ರವಾರದ ಘಟನೆಯ ಬಳಿಕ ಘಟಕ್ಕೆ ಹತ್ತಿಕೊಂಡ ಬೆಂಕಿಯನ್ನು ನಂದಿಸಲಾಗಿದೆಯೆಂದು ವರದಿಗಳು ತಿಳಿಸಿವೆ.
ಈ ದಾಳಿಯ ಹಿಂದೆ ಯಾರ ಕೈವಾಡವಿದೆಯೆಂದು ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ರಶ್ಯದ ಪ್ರಾಂತದೊಳಗೆ ನಡೆಯುವ ಇಂತಹ ದಾಳಿಗಳಲ್ಲಿ ತಮ್ಮ ಪಾತ್ರವಿರುವುದನ್ನು ಈವರೆಗೆ ಉಕ್ರೇನ್ ಸೇನಾಧಿಕಾರಿಗಳು ಬಹಿರಂಗವಾಗಿ ಒಪ್ಪಿಕೊಂಡಿಲ್ಲ.
Next Story