ಮಂಗಳೂರು: ಮೀಟರ್ ಕೇಬಲ್ ಕಳವು

ಮಂಗಳೂರು: ಉಳ್ಳಾಲ ನಗರ ಸಭೆಯ ಅಧೀನದಲ್ಲಿರುವ ನೀರಿನ ಸ್ಥಾವರಗಳಿಂದ ಸಾರ್ವನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಬಸ್ತಿಪಡ್ಪುವಸತಿ ಗೃಹದ ಬಳಿಯ ಪಂಪ್‌ನಿಂದ ಮತ್ತು ನಗರ ಸಭಾ ಕಚೇರಿಯ ಪಕ್ಕದಲ್ಲಿರುವ ತೆರೆದ ಬಾವಿಗೆ ಅಳವಡಿಸಿರುವ ಪಂಪ್‌ನಿಂದ ಹಾಗೂ ಉಳ್ಳಾಲ ಮೊಗವೀರಪಟ್ನ ಹಳೆಯ ಐಸ್ ಪ್ಯಾಕ್ಟರಿಯ ಬಳಿಯಿರುವ ಪಂಪ್‌ನಿಂದ ಕೇಬಲ್ ಕಳವುಗೈದ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಲಾಗಿದೆ.
ಎಪ್ರಿಲ್ 28ರ ರಾತ್ರಿ 9ರಿಂದ 29ರ ಬೆಳಗ್ಗೆ 7ರ ಮಧ್ಯೆ ಸುಮಾರು 75 ಮೀಟರ್ ಕೇಬಲನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿ ಮತ್ತು ಕಳವಾದ ಕೇಬಲ್‌ನ ಅಂದಾಜು ಮೌಲ್ಯ 11,250 ರೂ. ಆಗಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story