ಬೈಕ್ ಕಳವು

ಮಂಗಳೂರು, ಮೇ 5: ನಗರ ಹೊರವಲಯದ ಮಾಲೆಮಾರ್ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳವಾಗಿರುವುದಾಗಿ ಕಾವೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ವಿದ್ಯಾಧರ್ ಗೆ ಸೇರಿದ ಬೈಕ್‌ನ್ನು ಅವರ ಕೆಲಸದ ಲಕ್ಷ್ಮೀಶ ಎಂಬವರು ಎ.26ರಂದು ಸಂಜೆ 4ಕ್ಕೆ ಮಾಲೆಮಾರ್ ಬಳಿ ರಸ್ತೆ ಬದಿ ನಿಲ್ಲಿಸಿ ಪತ್ನಿಯ ಮನೆಗೆ ತೆರಳಿದ್ದರು. ಮೇ 1ರಂದು ಬೆಳಗ್ಗೆ 9:30ಕ್ಕೆ ಬಂದಾಗ ಬೈಕ್ ಕಳವಾಗಿದೆ ಎಂದು ದೂರು ನೀಡಲಾಗಿದೆ.
Next Story