Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾಂಗ್ರೆಸ್ ಬಲ ಹೆಚ್ಚಿಸೀತೇ ಜೆಡಿಎಸ್...

ಕಾಂಗ್ರೆಸ್ ಬಲ ಹೆಚ್ಚಿಸೀತೇ ಜೆಡಿಎಸ್ ಅಭ್ಯರ್ಥಿ ಬೆಂಬಲ?

ಎನ್.ಎಚ್. ನದಾಫ್ಎನ್.ಎಚ್. ನದಾಫ್6 May 2023 10:23 AM IST
share
ಕಾಂಗ್ರೆಸ್ ಬಲ ಹೆಚ್ಚಿಸೀತೇ ಜೆಡಿಎಸ್ ಅಭ್ಯರ್ಥಿ ಬೆಂಬಲ?

ಕಮಲಕ್ಕೆ ಈ ಸಲ ದೊಡ್ಡ ಹೊಡೆತ ಕೊಡಲಿದೆಯೇ ಧರ್ಮದ್ವೇಷದ ರಾಜಕಾರಣ? | ಬಿಜೆಪಿ ನಾಯಕರಿಗೇ ಬೇಡವಾಗಿದ್ದಾರೆಯೇ ಮಗ್ಗುಲ ಮುಳ್ಳಾಗಿರುವ ಯತ್ನಾಳ್? | ಕಾಂಗ್ರೆಸ್ ಬಲ ಹೆಚ್ಚಿಸೀತೇ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ ಬೆಂಬಲ? | ಕೈ-ಕಮಲ ನೇರ ಹಣಾಹಣಿಯಲ್ಲಿ ಏನು ನಿರ್ಣಯ ಬರೆಯಲಿದೆ ಜಾತಿ ಸಮೀಕರಣ?

ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕ. ಶಾಸಕರಾಗಿ, ಸಂಸದರಾಗಿ ಅನುಭವಿ. ಪ್ರಸಕ್ತ ವಿಜಯಪುರ ನಗರ ಕ್ಷೇತ್ರದ ಶಾಸಕ. ಬಿಜೆಪಿಯವರಿಗೆ ಇವರೆಂದರೆ ಮಗ್ಗುಲ ಮುಳ್ಳು. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ರಾಜಕೀಯ ವಲಯದಲ್ಲಿ ಸುದ್ದಿಯಲ್ಲಿರುವ ಇವರು, ಈ ಸಲದ ಚುನಾವಣಾ ಪ್ರಚಾರದಲ್ಲೂ ಅದನ್ನು ಮುಂದುವರಿಸಿದ್ದಾರೆ. ಧರ್ಮದ್ವೇಷದ ಮಾತುಗಳೂ ಅತಿಯಾಗಿವೆ. ರಾಜ್ಯ ಮತ್ತು ಕೇಂದ್ರದ ನಾಯಕರ ಕೆಂಗಣ್ಣಿಗೆ ಗುರಿಯಾಗುತ್ತಿರುವ, ಆದರೂ ಬಿಜೆಪಿಗೆ ಬೇಕೆನ್ನುವ ಮಟ್ಟಿಗೆ ಪ್ರಭಾವಿಯಾಗಿರುವ ಯತ್ನಾಳ್, ಮತ್ತೊಮ್ಮೆ ಅಭ್ಯರ್ಥಿ.

ವಿಜಯಪುರ ಐತಿಹಾಸಿಕ ನಗರ. ಕಲ್ಯಾಣಿ ಚಾಲುಕ್ಯರ ನೆಲೆ. ಆದಿಲ್‌ ಶಾಹಿ ಅರಸರ ರಾಜಧಾನಿ. ಇಲ್ಲಿ ವಿಶ್ವವಿಖ್ಯಾತ ಅದ್ಭುತ ಸ್ಮಾರಕಗಳಿವೆ. ಇದು ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಸಾಕ್ಷಿಯಾದ ನೆಲವೂ ಹೌದು. ಐತಿಹಾಸಿಕ, ಸಾಂಸ್ಕೃತಿಕ ವೈಶಿಷ್ಟ್ಯತೆಯ ಈ ನೆಲದಲ್ಲಿ ಕಳೆದ ಮೂರು ದಶಕಗಳಿಂದ ಧರ್ಮ-ಜಾತಿ ಆಧರಿಸಿದ ರಾಜಕಾರಣ ಬೆಳೆದು ನಿಂತಿದೆ. ಪ್ರೀತಿ- ಸಹಬಾಳ್ವೆಯನ್ನು ಬೋಧಿಸಿದ ಈ ಸೂಫಿ ನೆಲದಲ್ಲಿ ದ್ವೇಷವೇ ರಾಜಕಾರಣವನ್ನು ನಿಯಂತ್ರಿಸುತ್ತಿದೆ ಎಂಬುದು ಅಚ್ಚರಿಯ ಸಂಗತಿ.

ಕಳೆದ ಹದಿನೈದು ವಿಧಾನಸಭಾ ಚುನಾವಣೆಗಳಲ್ಲಿ ಎರಡು ಬಾರಿ ಹೊರತುಪಡಿಸಿದರೆ, ಉಳಿದ 8 ಬಾರಿ ಕಾಂಗ್ರೆಸ್, 5 ಬಾರಿ ಬಿಜೆಪಿ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಿವೆ. ಸುಮಾರು ಶೇ. 32ರಷ್ಟು ಮುಸ್ಲಿಮ್ ಮತಗಳಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿ ಬಾರಿ ಮುಸ್ಲಿಮ್ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತಾ ಬಂದಿದೆ. ಎರಡನೇ ಅತಿ ಹೆಚ್ಚು ಮತಗಳನ್ನು ಹೊಂದಿರುವುದು ಲಿಂಗಾಯತ ಸಮುದಾಯ. ಹಾಗಾಗಿ ಬಿಜೆಪಿ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾ ಬಂದಿದೆ. ಮುಸ್ಲಿಮ್ ಮತಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಮಾತುಗಳನ್ನಾಡುತ್ತಾ ಕ್ಷೇತ್ರದಲ್ಲಿ ಕೋಮುಧ್ರುವೀಕರಣದ ರಾಜಕಾರಣ ಆರಂಭವಾಗಿ ವರ್ಷಗಳೇ ಕಳೆದವು. ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮೂರು ಬಾರಿ ಧರ್ಮಾಧಾರಿತ ರಾಜಕಾರಣದ ಮೂಲಕವೇ ಅಧಿಕಾರ ಹಿಡಿದಿದೆ.

► ಮೋದಿ, ರಾಹುಲ್ ಪ್ರಚಾರ

ವಿಜಯಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಈ ಬಾರಿ ನೇರ ಹಣಾಹಣಿಯಿದೆ. ಹಾಗೆಯೇ ಪ್ರಚಾರದ ಅಬ್ಬರವೂ ಕಡಿಮೆಯಿಲ್ಲ. ಬಿಜೆಪಿ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಬಂದುಹೋಗಿದ್ದಾರೆ. ಒಂದೆಡೆ ಮೋದಿ ಸಮಾವೇಶ ನಡೆದರೆ, ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ ಇಲ್ಲಿ ರೋಡ್ ಶೋ ನಡೆಸಿದ್ದಾರೆ. ಎರಡೂ ಪಕ್ಷಗಳೂ ಕದನ ಕಣವನ್ನು ಎಷ್ಟು ಪ್ರತಿಷ್ಠೆಯದ್ದಾಗಿ ತೆಗೆದುಕೊಂಡಿವೆ ಎಂಬುದಕ್ಕೆ ಇದು ಸಾಕ್ಷಿ.

► ದ್ವೇಷದ ಮಾತು

ಪಕ್ಷದೊಳಗೆ ಸದಾ ಬಂಡಾಯದ ಬಾವುಟ ಹಾರಿಸುವ ಬಸನಗೌಡ ಪಾಟೀಲ್ ಯತ್ನಾಳ್ ಈ ಸಲವೂ ಬಿಜೆಪಿ ಅಭ್ಯರ್ಥಿ. ವಿವಾದಾತ್ಮಕ ಹೇಳಿಕೆಗಳಿಂದಲೇ ಯಡವಟ್ಟು ಮಾಡಿಕೊಳ್ಳುವ ಯತ್ನಾಳ್, ಬಿಜೆಪಿಯಲ್ಲಿ ಸಿಎಂ ಆಗಲು 2,500 ಕೋಟಿ ರೂ., ಸಚಿವರಾಗಲು 100 ಕೋಟಿ ರೂ. ಸಿದ್ಧವಿಟ್ಟುಕೊಳ್ಳಬೇಕು ಎನ್ನುವಂಥ ಹೇಳಿಕೆಗಳಿಂದ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿದ್ದೂ ಇದೆ. ಯಡಿಯೂರಪ್ಪವಿರುದ್ಧದ ಬಿಡುಬೀಸು ಮಾತು, ಪಕ್ಷದ ವಿರುದ್ಧದ ಹೇಳಿಕೆಗಳು, ನಿರಾಣಿ ಜೊತೆಗಿನ ಕದನ ಇವೆಲ್ಲದರ ಬಳಿಕವೂ ಬಿಜೆಪಿಯ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಈ ಬಾರಿಯೂ ಅವರ ದ್ವೇಷಭಾಷಣ ಮುಂದುವರಿದಿದೆ. ಮುಸ್ಲಿಮ್ ಮತಗಳೇ ಬೇಕಿಲ್ಲ ಎಂದು ಹೇಳುವುದು ಒಂದೆಡೆಯಾದರೆ, ಸೋನಿಯಾ ವಿರುದ್ಧ ಮೊನ್ನೆ ವಿಷಕನ್ಯೆ ಎಂಬ ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆಯೇ, ತನಗೂ ಸಿಎಂ ಆಗುವ ಅರ್ಹತೆ ಇದೆ ಎಂದಿರುವ ಅವರು, ಅವಕಾಶ ಕೊಟ್ಟರೆ ಯುಪಿ ಮಾದರಿ ಅಧಿಕಾರ ಮಾಡುತ್ತೇನೆ ಎಂದೂ ಹೇಳಿದ್ದಾರೆ. ಪ್ರಧಾನಿ ಬಂದಾಗ ಹಿಂದಿಯಲ್ಲೇ ಭಾಷಣ ಮಾಡಿದ್ದು ಅವರನ್ನು ಮೆಚ್ಚಿಸುವುದಕ್ಕೆ ಎಂದೇ ಹೇಳಲಾಗುತ್ತಿದೆ.

► ಕಾಂಗ್ರೆಸ್ ಲೆಕ್ಕಾಚಾರ

ಕ್ಷೇತ್ರದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್. ನೀರಾವರಿ ಈ ಕ್ಷೇತ್ರದ ಬಹುದೊಡ್ಡ ಸಮಸ್ಯೆ. 2013ರ ಚುನಾವಣೆಯಲ್ಲಿ ಇದನ್ನೇ ಅಸ್ತ್ರವಾಗಿಸಿಕೊಂಡಿದ್ದ ಅದು, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯ ಮೂಲಕ ಕೃಷ್ಣಾ ನದಿ ತೀರದ ಮತದಾರರನ್ನು ತನ್ನತ್ತ ಸೆಳೆದುಕೊಂಡಿತ್ತು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಡಾ. ಮಕ್ಬೂಲ್ ಭಗವಾನ್, ಜೆಡಿಎಸ್ ನಿಂದ  ಕಣಕ್ಕಿಳಿದಿದ್ದ ಯತ್ನಾಳರಿಗೆ ಸೋಲುಣಿಸಿದ್ದರು. ಬಳಿಕ 2018ರ ಚುನಾವಣೆಯಲ್ಲಿ ಯತ್ನಾಳ್ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಅಬ್ದುಲ್ ಹಮೀದ್ ಮುಶ್ರೀಫ್ ಸಣ್ಣ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿ ಮತ್ತೊಮ್ಮೆ ಮುಶ್ರೀಫ್ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಮುಶ್ರೀಫ್ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವ ಮೂಲಕ ಗಮನ ಸೆಳೆಯುತ್ತಿದ್ದವರು. ತಮ್ಮ ಸಾಮಾಜಿಕ ಚಟುವಟಿಕೆಗಳಿಂದಲೇ ಮನೆಮಾತಾಗಿದ್ದಾರೆ. ಆದರೆ ಮುಶ್ರೀಫ್ ವಿರುದ್ಧವೂ ಪಕ್ಷದೊಳಗೆ ಮತ್ತು ಮುಸ್ಲಿಮ್ ಸಮುದಾಯದಲ್ಲೂ ಕೊಂಚ ಅಸಮಾಧಾನ ಇದೆಯೆಂದು ಹೇಳಲಾಗುತ್ತಿದೆ. ಇನ್ನು ಮಾಜಿ ಶಾಸಕ ಮಕ್ಬೂಲ್ ಭಗವಾನ್ ಕೂಡ ಮುಶ್ರೀಫ್ ಮೇಲೆ ಈವರೆಗೆ ಮುನಿಸಿಕೊಂಡಿದ್ದರು. ಆದರೆ ಈಗ ಮುನಿಸು ಬದಿಗಿಟ್ಟು ಮುಶ್ರೀಫ್ ಜೊತೆ ನಿಂತಿದ್ದಾರೆ ಎನ್ನಲಾಗಿದೆ. ಹಾಗಾಗಿ ಮುಶ್ರೀಫ್ ಪಾಲಿಗೆ ಬಲ ಬಂದಂತಾಗಿದೆ.

►ಜೆಡಿಎಸ್ ಅಭ್ಯರ್ಥಿ ಬೆಂಬಲ

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯೂ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ, ಜೆಡಿಎಸ್ ಅಭ್ಯರ್ಥಿ ಬಂದೇನವಾಝ್ ಮಹಾಬರಿ, ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಗೆಲುವು ಕಷ್ಟಕರವಾಗಲಿದೆ ಎಂದೇ ಹೇಳಲಾಗುತ್ತಿದೆ.

ವಿಜಯಪುರ ನಗರ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಇಲ್ಲ. ಪ್ರಚಾರಕ್ಕಾಗಿ ಎರಡು ದಿನ ತೆರಳಿದಾಗ ನಮಗೆ ಯಾವುದೇ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಇದರಿಂದಾಗಿ ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದೇನೆ ಎಂದು ಮಹಾಬರಿ ಹೇಳಿದ್ದಾರೆ. ಹೀಗೆ ಕೊನೇ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಜೊತೆ ಕೈ ಜೋಡಿಸಿರುವುದರಿಂದ ಚುನಾವಣಾ ಅಖಾಡ ಕುತೂಹಲ ಕೆರಳಿಸಿದೆ. 2018ರಲ್ಲಿ ಕೇವಲ 6,413 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಯತ್ನಾಳ್ ಎದುರು, ಇದು ಹೊಸ ಸಮೀಕರಣ ಬರೆಯಲಿದೆ ಎನ್ನಲಾಗುತ್ತಿದೆ.

► ಬಿಜೆಪಿಗೆ ಮುಳುವಾಗಲಿರುವುದೇನು?

ಎರಡು ವಿಚಾರಗಳು ಯತ್ನಾಳ್ ಗೆಲುವಿಗೆ ತೊಡಕಾಗಬಹುದು ಎಂಬುದು ವಿಶ್ಲೇಷಕರ ಲೆಕ್ಕಾಚಾರ. ಮೊದಲನೆಯದಾಗಿ, ಯತ್ನಾಳ್ ವಿರುದ್ಧ ಪಕ್ಷದೊಳಗೇ ಇರುವ ಅಸಮಾಧಾನ. ಯಡಿಯೂರಪ್ಪನವರಂಥ ಹಿರಿಯ ನಾಯಕರು ಯತ್ನಾಳ್ ವಿಚಾರದಲ್ಲಿ ಯಾವ ನಿಲುವು ತಾಳುತ್ತಾರೆ, ತೆರೆಯ ಹಿಂದಿನ ಅವರ ಆಟ ಏನಿರಬಹುದು ಎಂಬುದು ಮುಖ್ಯವಾಗಲಿದೆ. ಅಲ್ಲದೆ, ಮಾಜಿ ಸಚಿವ ಅಪ್ಪುಪಟ್ಟಣಶೆಟ್ಟಿ ತಮಗೆ ಟಿಕೆಟ್ ಸಿಗಲಿಲ್ಲವೆಂಬ ಅಸಮಾಧಾನ ದಲ್ಲಿದ್ದಾರೆ. ಪಕ್ಷದ ನಾಯಕರ ವಿರುದ್ಧವೇ ಮಾತನಾಡುವ ಯತ್ನಾಳ್ ಅದರ ಫಲವನ್ನು ಚುನಾವಣೆಯಲ್ಲಿ ಅನುಭವಿಸಬೇಕಾಗಿ ಬರಬಹುದು ಎನ್ನಲಾಗುತ್ತಿದೆ.

ಎರಡನೆಯದಾಗಿ, ಯತ್ನಾಳ್ ಮುಸ್ಲಿಮ್ ಸಮುದಾಯದ ವಿರುದ್ಧ ಮಾತನಾಡುತ್ತಿರುವುದು ಹಾಗೂ ಮೀಸಲಾತಿ ವಿಚಾರ ಮುಸ್ಲಿಮರ ಮತ್ತು ಇನ್ನೊಂದೆಡೆ ಬಂಜಾರರ ಅಸಮಾಧಾನಕ್ಕೂ ಕಾರಣವಾಗಿರುವುದು ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಒಳಮೀಸಲಾತಿ ಘೋಷಣೆ ಪರಿಣಾಮವಾಗಿ ಬಂಜಾರ ಸಮುದಾಯ ಬಿಜೆಪಿ ವಿರುದ್ಧ ತಿರುಗಿಬಿದ್ದಿರುವುದು ಒಂದೆಡೆಯಾದರೆ, ಯತ್ನಾಳ್ ಜೊತೆಗಿದ್ದ ಅಲ್ಪಸ್ವಲ್ಪ ಮುಸ್ಲಿಮರೂ ಮೀಸಲಾತಿ ರದ್ದು ಘೋಷಣೆ ಬಳಿಕ ದೂರವಾಗಿದ್ದಾರೆ ಎನ್ನಲಾಗಿದೆ. ಇದು ಯತ್ನಾಳ್ಗೆ ಹೊಡೆತ ಕೊಡಲಿದೆ. ಇನ್ನು ಬಣಜಿಗ ಸಮುದಾಯದ ವಿರುದ್ಧ ಯತ್ನಾಳ್ ನೀಡಿದ್ದಾರೆನ್ನಲಾದ ಅವಹೇಳನಕಾರಿ ಹೇಳಿಕೆ ಕೂಡ ತಿರುಗುಬಾಣವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

► ಸೋಲಿಸುವ ಹಠ ತೊಟ್ಟ ಪಾಟೀಲ್

ರಾಜಕೀಯದಲ್ಲಿ ಬೇರೆಬೇರೆಯಾದರೂ ರಾಜಕೀಯದ ಹೊರಗೆ ಯತ್ನಾಳ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬುದು ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲರ ಬಗ್ಗೆ ಕೇಳಿಬರುವ ಮಾತು. ಆದರೆ ಈ ಬಾರಿ ಯತ್ನಾಳ್ ಅವರನ್ನು ಸೋಲಿಸಲೇಬೇಕೆಂದು ಪಾಟೀಲ್ ಹಠ ತೊಟ್ಟಂತಿದೆ. ಕ್ಷೇತ್ರದ ಪ್ರಮುಖ ವಾರ್ಡ್ಗಳಲ್ಲಿ ಅವರು ಸಭೆ ನಡೆಸಿ ಮತಯಾಚಿಸಿದ್ದಾರೆ. ಇವೆಲ್ಲವೂ ಯತ್ನಾಳ್ ಎದುರಿನ ದಾರಿಯನ್ನು ಕಠಿಣಗೊಳಿಸಲಿವೆ ಎನ್ನಲಾಗುತ್ತಿದೆ. 

► ಐತಿಹಾಸಿಕ ನಗರಿಯ ಇಂದಿನ ಸಮಸ್ಯೆ

ಕ್ಷೇತ್ರದಲ್ಲಿ ಸಮಸ್ಯೆಗಳಿಗೂ ಕೊರತೆಯಿಲ್ಲ. ವಿಜಯಪುರ ನಗರ ಅದ್ಭುತ ವಾಸ್ತುಶಿಲ್ಪವಿರುವ ಸ್ಮಾರಕಗಳಿರುವ ತಾಣ. ಇದು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಬೇಕೆಂಬ ಆಗ್ರಹವೂ ಇದೆ. ಗೋಳಗುಮ್ಮಟ, ಇಬ್ರಾಹೀಂ ರೋಜಾ, ಮಲಿಕ್ ಎ ಮೈದಾನ್ ಫಿರಂಗಿ, ಜುಮಾ ಮಸೀದಿ, ಬಾರಾ ಕಮಾನ್, ಅಸರ್ ಮಹಲ್, ಗಗನ್ ಮಹಲ್, ಸಂಗೀತ್ ಮಹಲ್ ಸೇರಿದಂತೆ ಹಲವು ಸ್ಮಾರಕಗಳಿವೆ. ದಿನವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ನಗರದಲ್ಲಿ ಕುಡಿಯುವ, ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.

ಪ್ರತೀ ಚುನಾವಣೆಯಲ್ಲಿ ಭರವಸೆಗಳನ್ನು ಕೇಳಿಸಿಕೊಳ್ಳುವ ಮತದಾರರು, ಅವು ಕಾರ್ಯರೂಪಕ್ಕೆ ಬರುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದಷ್ಟು ಬೇಸತ್ತಿದ್ದಾರೆ. ತಾನು ಸ್ಮಾರ್ಟ್ ಸಿಟಿ ಮಾಡಿದ್ದೇನೆ ಎಂದು ಯತ್ನಾಳ್ ಹೇಳಿಕೊಳ್ಳುತ್ತಿದ್ದರೆ, ಯಾವ ಅಭಿವೃದ್ಧಿಯೂ ಆಗಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಇವೆಲ್ಲ ಸಮಸ್ಯೆಗಳ ನಡುವೆಯೇ ಮತ್ತೊಂದು ಚುನಾವಣೆಗೆ ಇನ್ನು ಕೆಲವೇ ದಿನಗಳು. ಅಭಿವೃದ್ಧಿ ವಿಚಾರವನ್ನು ಬದಿಗೆ ತಳ್ಳಿ, ಜಾತಿ ಮತ್ತು ಧರ್ಮದ ಬಲದಿಂದ ಗೆಲ್ಲುತ್ತೇವೆಂದುಕೊಂಡವರ ಎದುರಲ್ಲಿಯೂ ಸವಾಲುಗಳಿವೆ. ಅಂತಿಮವಾಗಿ ಮತದಾರರ ತೀರ್ಮಾನ ಏನಿರಲಿದೆ ಎಂಬುದು ತಿಳಿಯುವುದಕ್ಕೂ ಹೆಚ್ಚು ದಿನಗಳಿಲ್ಲ.

share
ಎನ್.ಎಚ್. ನದಾಫ್
ಎನ್.ಎಚ್. ನದಾಫ್
Next Story
X