ಸೇತುವೆಯಿಂದ ಕೆಳಗೆ ಬಿದ್ದ ತ್ರಿಚಕ್ರ ವಾಹನ: ಮೂರು ಮಂದಿ ಮೃತ್ಯು, 8 ಮಂದಿಗೆ ಗಂಭೀರ ಗಾಯ
ಅಹಮದಾಬಾದ್: ಗುಜರಾತ್ನ ದೇವಭೂಮಿ ದ್ವಾರಕಾ ಜಿಲ್ಲೆಯ ಭಾನ್ವಾಡ್ ಪಟ್ಟಣದ ಬಳಿ ಶನಿವಾರ ತ್ರಿಚಕ್ರ ವಾಹನವೊಂದು ಸೇತುವೆಯಿಂದ ಕೆಳಗೆ ಬಿದ್ದು ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಹಾಗೂ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಹಾಗೂ ತ್ರಿಚಕ್ರ ವಾಹನದ ಚಾಲಕ ಸಾವನ್ನಪ್ಪಿದ್ದಾರೆ. ಎಂಟು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ ಎಂದು ಭನ್ವಾಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಚಕ್ಡಾ' ವಾಹನವು ನಿಯಂತ್ರಣ ಕಳೆದುಕೊಂಡು ಸೇತುವೆಯ ಮೇಲಿನ ಬೇಲಿಯನ್ನು ಮುರಿದು 20 ಅಡಿಗಳಷ್ಟು ಒಣಗಿದ ನದಿಯ ತಳಕ್ಕೆ ಧುಮುಕಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಚಕ್ಡಾ ಮೂರು-ಚಕ್ರ ವಾಹನವಾಗಿದ್ದು, ಮುಖ್ಯವಾಗಿ ರಾಜ್ಯದ ಸೌರಾಷ್ಟ್ರ ಪ್ರದೇಶದಲ್ಲಿ ಪ್ರಯಾಣಿಸಲು ಹಾಗೂ ಸರಕುಗಳ ಸಾಗಣೆಗೆ ಬಳಸಲಾಗುತ್ತದೆ
Next Story