ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ ನೀಡಿದ ಇಬ್ಬರು ಬೈಕ್ ಸವಾರರು: ಒಬ್ಬನ ಬಂಧನ

ಹೊಸದಿಲ್ಲಿ: ಕ್ರಿಕೆಟಿಗ ನಿತೀಶ್ ರಾಣಾ (Cricketer Nitish Rana) ಅವರ ಪತ್ನಿಯನ್ನು ಇಬ್ಬರು ಯುವಕರು ಹಿಂಬಾಲಿಸಿ ಆಕೆಗೆ ಕಿರುಕುಳ ನೀಡಿದ ಘಟನೆ ದಿಲ್ಲಿಯಲ್ಲಿ ನಡೆದಿದೆ. ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ದಿಲ್ಲಿಯ ಕೀರ್ತಿನಗರ್ ಪ್ರದೇಶದಲ್ಲಿನ ತಮ್ಮ ಕಚೇರಿಯಿಂದ ಮನೆಗೆ ರಾಣಾ ಅವರ ಪತ್ನಿ ಸಾಚಿ ಮಾರ್ವಾಹ್ ಮರಳುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಆಕೆಯ ಕಾರಿನ ಪಕ್ಕಕ್ಕೆ ಬಂದು ಕಾರಿಗೆ ಢಿಕ್ಕಿ ಹೊಡೆಯಲು ಆರಂಭಿಸಿದ್ದರು. ಈ ಘಟನೆಯ ಚಿತ್ರಗಳನ್ನು ಕ್ಲಿಕ್ಕಿಸಿದ ಸಾಚಿ ಆ ವ್ಯಕ್ತಿಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಆರಂಭದಲ್ಲಿ ದಿಲ್ಲಿ ಪೊಲೀಸರು ತಮ್ಮ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲು ನಿರಾಕರಿಸಿದ್ದರು ಹಾಗೂ ಆಕೆ ಮನೆಗೆ ಸುರಕ್ಷಿತವಾಗಿ ತಲುಪಿರುವುದರಿಂದ ಅಲ್ಲಿಗೇ ಬಿಟ್ಟುಬಿಡಲು ಹೇಳಿದ್ದರು ಎದೂ ಸಾಚಿ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಮುಂದಿನ ಬಾರಿ ಅವರ ವಾಹನ ಸಂಖ್ಯೆ ಗಮನಿಸುವಂತೆ ಸೂಚಿಸಿದ್ದರು ಎಂದು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿರುವ ಸಾಚಿ, ಅಷ್ಟೇ ಆಕೆ ಅವರ ಫೋನ್ ನಂಬರ್‌ಗಳನ್ನೂ ಪಡೆಯುತ್ತೇನೆ ಎಂದು ವಿಡಂಬನಾತ್ಮಕವಾಗಿ ಬರೆದಿದ್ದಾರೆ.
ಸಾಚಿ ಅವರು ವೃತ್ತಿಯಲ್ಲಿ ಆರ್ಕಿಟೆಕ್ಚರಲ್ ಡಿಸೈನರ್ ಆಗಿದ್ದಾರೆ.
ಇದನ್ನೂ ಓದಿ: ಮುಳ್ಳುತಂತಿಯ ಹಿಂದೆ ಇರುವ ಮಕ್ಕಳನ್ನು ಭೇಟಿಯಾದ ಪ್ರಧಾನಿ ಮೋದಿ: ಹಿಟ್ಲರ್ ಜೊತೆ ಹೋಲಿಸಿದ ನೆಟ್ಟಿಗರು
Just saw Nitish Rana’s wife’s Instagram stories (Saachi Marwah). Two men hit her car and followed her and Delhi police to her to leave it since they left??? This is so unacceptable! pic.twitter.com/UMQwB92xWo
— PS (@Neelaasapphire) May 5, 2023







