ಬಿಜೆಪಿ ಷಡ್ಯಂತ್ರದಿಂದ ಡಿವೈಎಫ್ಐ ವಿರುದ್ಧ ಎಫ್ಐಆರ್: ಬಿ.ಕೆ.ಇಮ್ತಿಯಾಝ್ ಆರೋಪ

ಉಳ್ಳಾಲ: ಹರೇಕಳ- ಅಡ್ಯಾರ್ ಸೇತುವೆ ತೆರವು ವಿಚಾರವನ್ನು ಕಾರಣವಾಗಿದ್ದು ಕೊಂಡು ಬಿಜೆಪಿ ಯ ಕುಮ್ಮಕ್ಕು ವಿನಿಂದ ಅಂತರ್ಜಲ ಅಭಿವೃದ್ಧಿ ವಿಭಾಗದ ಇಂಜಿನಿಯರ್ ವಿಷ್ಣು ಕಾಮತ್ ಮೂಲಕ ನಮ್ಮ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಆರೋಪಿಸಿದ್ದಾರೆ.
ಅವರು ತೊಕ್ಕೋಟ್ಟುವಿನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2020ರಲ್ಲಿ ಪ್ರಾರಂಭ ಗೊಂಡ ಹರೇಕಳ-ಅಡ್ಯಾರ್ ಸೇತುವೆ ಕಾಮಗಾರಿ ಪೂರ್ಣ ಗೊಂಡಾಗ ಉದ್ಘಾಟನೆ ಗಾಗಿ ಜನರು ಎದುರು ನೋಡುತ್ತಿ ದ್ದರು. ಮಂಗಳೂರಿಗೆ 25 ಕಿ.ಮೀ. ಸುತ್ತುವರಿದು ಸಂಚರಿಸುವ ಬದಲು ಇದೇ ಹತ್ತಿರ ದ ದಾರಿಯಾಗಿತ್ತು. ಈ ಕಾರಣದಿಂದ ಇಲ್ಲಿನ ಜನತೆ ದೋಣಿ ಮೂಲಕ ವೇ ಹೋಗುತ್ತಿದ್ದರು.ಈ ಸೇತುವೆ ಕಾಮಗಾರಿ ಪೂರ್ಣ ಗೊಂಡ ಬಳಿಕ ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ರಾತ್ರಿ ಕೆಲಸ ಬಿಟ್ಟು ಬರುವವರು ಹಾಕಲಾದ ಬೇಲಿಯನ್ನು ಹಾರಿ ಬರುತ್ತಿದ್ದರು. ಈ ಸಂದರ್ಭ ಕೆಲವರಿಗೆ ಗಾಯ ಕೂಡಾ ಆಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡುವಂತೆ ನಾವು ಮನವಿ ಮಾಡಿದ್ದೆವು. ಮಾ.21 ರಂದು ಕಾಮಗಾರಿ ಪೂರ್ಣ ಗೊಂಡ ಬಳಿಕ ಎಪ್ರಿಲ್ 1 ರಂದು ಉದ್ಘಾಟನೆ ಎಂದು ಸುದ್ದಿ ಆಗಿತ್ತು. ಆದರೆ ಆ ದಿನಾಂಕ ದಂದು ಉದ್ಘಾಟನೆ ಆಗದ ಕಾರಣ ನಾವು ಜಿಲ್ಲಾಧಿಕಾರಿ ಯವರಿಗೆ ಮನವಿ ಮಾಡಿದ್ದೆವು. ಜಿಲ್ಲಾಧಿಕಾರಿಯವರು ರಸ್ತೆ ಸಾರ್ವಜನಿಕ ರಿಗೆ ಬಿಟ್ಟು ಕೊಡುವಂತೆ ಸೂಚಿಸಿದರೂ ಕೂಡಾ ಅಂತರ್ಜಲ ಅಭಿವೃದ್ಧಿ ವಿಭಾಗದ ಇಂಜಿನಿಯರ್ ವಿಷ್ಣು ಕಾಮತ್ ಇದನ್ನು ಬಿಟ್ಟು ಕೊಡುವ ಗೋಜಿಗೆ ಹೋಗಲಿಲ್ಲ. ಸಂಚಾರಕ್ಕೆ ರಾತ್ರಿ11ವರೆಗೆ ವಿಸ್ತರಣೆ ಮಾಡುವಂತೆ ವಿನಂತಿಸಿದರೂ ಅವರು ಸ್ಪಂದನ ಮಾಡಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳ ಸ್ಪಂದನ ಸಿಗದ ಕಾರಣ ಸಾರ್ವಜನಿಕರಿಗಾಗುತ್ತಿರುವ ತೊಂದರೆ ಗಮನಿಸಿ ನಾವೇ ತಡೆಬೇಲಿ ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ತೆರವು ಮಾಡಿ 15 ಕಳೆದ ಬಳಿಕ ವಿಷ್ಣು ಕಾಮತ್ ನಮ್ಮ ವಿರುದ್ಧ ಕೊಣಾಜೆ ಠಾಣೆಯಲ್ಲಿ ದೂರು ನೀಡಿದ್ದಾರೆ.ಪೊಲೀಸರು ನಮ್ಮನ್ನು ಕರೆಸಿ ಹೇಳಿಕೆ ಪಡೆದು ದೂರನ್ನು ಇತ್ಯರ್ಥ ಪಡಿಸಿದ್ದರು. ಈ ಘಟನೆ ನಡೆದು ಒಂದು ತಿಂಗಳು ಕಳೆದ ಬಳಿಕ ಮೇ 2 ರಂದು ಬಿಜೆಪಿ ಸೋಲಿನ ಭೀತಿ ಯಿಂದ ಅಂತರ್ಜಲ ಅಭಿವೃದ್ಧಿ ವಿಭಾಗದ ಇಂಜಿನಿಯರ್ ವಿಷ್ಣು ಕಾಮತ್ ಮೂಲಕ ನಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದೆ.ಇದರ ಹಿಂದೆ ಬಿಜೆಪಿ ಷಡ್ಯಂತ್ರ ಇದೆ. ನಾವು ಬಿಜೆಪಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುವ ಕಾರಣದಿಂದ ಲೇ ಬಿಜೆಪಿ ಈ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ ರಫೀಕ್ ಹರೇಕಳ, ಜಿಲ್ಲಾ ಸಹ ಕಾರ್ಯದರ್ಶಿ ಗಳಾದ ರಝಾಕ್ ಮೊಂಪದವು, ನಿತಿನ್ ಕುತ್ತಾರ್, ವಲಯ ಕೋಶಾಧಿಕಾರಿ ಅಶ್ರಫ್ ಹರೇಕಳ, ಗ್ರಾಮ ಸಮಿತಿ ಕಾರ್ಯದರ್ಶಿ ರಿಜ್ವಾನ್ ಖಂಡಿಗ ಉಪಸ್ಥಿತರಿದ್ದರು