ಮಣಿಪುರ ಹಿಂಸಾಚಾರ: ಕರ್ನಾಟಕದಲ್ಲಿ ಅಮಿತ್ ಶಾ ಪ್ರಚಾರ ನಿಲ್ಲಿಸಿದ್ದಾರೆಂದು ಸುಳ್ಳು ಸುದ್ದಿ ವರದಿ
ವರದಿ ಪ್ರಕಟದ ಮರುದಿನ ಬೆಳಗಾವಿಯಲ್ಲಿ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ

ಹೊಸದಿಲ್ಲಿ: ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ವಿಧಾನಸಭೆಗೆ ನಡೆಸಲಿದ್ದ ಎಲ್ಲಾ ಪ್ರಚಾರ ಕಾರ್ಯಗಳನ್ನು ರದ್ದುಗೊಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿತ್ತು. ಆದರೆ, ಅಮಿತ್ ಶಾ ಅವರು ಬೆಳಗಾವಿಯ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಮಣಿಪುರದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಶಾ, ಪರಿಸ್ಥಿಯನ್ನು ಸಹಜ ಸ್ಥಿತಿಗೆ ತರಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಅಧಿಕಾರಿಗಳೊಂದಿಗೆ ಸಭೆಗಳನ್ನು ಮುಂದುವರೆಸುವ ಸಲುವಾಗಿ ಕರ್ನಾಟಕ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದಾರೆ ಎಂದು ಮೇ.5 ರಂದು ಮೂಲಗಳನ್ನುಲ್ಲೇಖಿಸಿ ANI ವರದಿ ಮಾಡಿತ್ತು.
ಆದರೆ, ಮೇ. 6 ರಂದು ಅಮಿತ್ ಶಾ ಅವರು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಮತಪ್ರಚಾರದಲ್ಲಿ ತೊಡಗಿರುವುದಾಗಿ ಸ್ವತಃ ಅಮಿತ್ ಶಾ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ. ಆ ಮೂಲಕ ಅಮಿತ್ ಶಾ ಅವರು ಕರ್ನಾಟಕದಲ್ಲಿ ಪ್ರಚಾರ ಕಾರ್ಯದಿಂದ ಹಿಂದೆ ಸರಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
Amit Shah cancels Karnataka poll campaign; to closely monitor situation in violence-hit Manipur
— ANI Digital (@ani_digital) May 5, 2023
Read @ANI Story | https://t.co/cg9av3kMTn#AmitShah #Manipur #ManipurViolence #Imphal #MHA pic.twitter.com/2HkYzUjvez
Addressing a public rally at Savadatti Yellamma Assembly Constituency.
— Amit Shah (@AmitShah) May 6, 2023
ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಮಾವೇಶ. https://t.co/9FYewADCr0
FAKE NEWS! He's currently addressing a public rally at Savadatti Yellamma Assembly Constituency in Karnataka. https://t.co/M9UeKg59AV
— Mohammed Zubair (@zoo_bear) May 6, 2023







