ಬಡವರು ಕೂತ ಸರಕಾರಿ ಜಾಗಕ್ಕೆ ಹಕ್ಕುಪತ್ರ: ವಿನಯ ಕುಮಾರ್ ಸೊರಕೆ

ಪೆರ್ಡೂರು: ಸರಕಾರಿ ಜಾಗದಲ್ಲಿ ಬಹಳಷ್ಟು ವರ್ಷಗಳಿಂದ ಮನೆ ಮಾಡಿ ನೆಲೆಸಿದವರಿಗೆ ಅದೇ ಜಾಗಕ್ಕೆ ಹಕ್ಕು ಪತ್ರ ಒದಗಿಸುವ ಕಾರ್ಯವನ್ನು ಕಾನೂನಿನಂತೆ ಮಾಡಿಕೊಡಲಾಗುವುದು ಎಂದು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಪೆರ್ಡೂರು ಬುಕ್ಕಿಗುಡ್ಡೆಯ ಕೈರ್ ಎಂಬಲ್ಲಿ ಮನೆ ಮನೆ ಚುನಾವಣಾ ಪ್ರಚಾರ ಮಾಡಿ ಅಅವರು ಮಾತನಾಡು ತ್ತಿದ್ದರು. ಸರಕಾರಿ ಜಾಗದಲ್ಲಿ ಕೂತ ಬಡವರನ್ನು ಎಬ್ಬಿಸಿ ಬುಲ್ಡೋಜರ್ ಓಡಿಸಿ ಒಕ್ಕಲೆಬ್ಬಿಸುವ ದುಸ್ಸಾಹಸಕ್ಕೆ ಬಿಜೆಪಿ ಕೈ ಹಾಕಿದೆ. ಕಳೆದ ೫ ವರ್ಷದ ಬಿಜೆಪಿ ಸಾಧನೆಗಳಲ್ಲಿ ಇದು ಕೂಡಾ ಒಂದು. ಕಾಂಗ್ರೆಸ್ ಇಂದಿರಾಗಾಂಧಿ ಕಾಲದಿಂದಲೂ ಡಿಕ್ಲರೇಷನ್ ಕಾನೂನು ಮೂಲಕ ಭೂಮಿ ನೀಡುವ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಬಡವರ ಪಕ್ಷ ಕಾಂಗ್ರೆಸ್‌ನ್ನು ಗೆಲ್ಲಿಸಿದರೆ ಹಕ್ಕುಪತ್ರ ಕೊಡುವ ಕಾರ್ಯಕ್ರಮಕ್ಕೆ ಮೊದಲ ಆದ್ಯತೆ ನೀಡಲಾಗು ವುದು ಎಂದರು.
ನಂತರ ಪೆರ್ಡೂರು ವ್ಯಾಪ್ತಿಯ ಹತ್ರಿಬೈಲು ವಿಜಯಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್ ಮತ್ತು ಬುಕ್ಕಿಗುಡ್ಡೆಯಲ್ಲಿ ಎಪಿಎಂ ಕ್ಯಾಶ್ಯೂ ಇಂಡಸ್ಟ್ರೀಸ್‌ಗೆ ಭೇಟಿ ಅಲ್ಲಿನ ಕಾರ್ಮಿಕರ ಸಮಸ್ಯೆಯನ್ನು ಆಲಿಸಿ ಮತಯಾಚನೆ ಮಾಡಿದರು. ಪೆರ್ಡೂರು ಬುಕ್ಕಿಗುಡ್ಡೆ ಕೈರ್ ವ್ಯಾಪ್ತಿಯ ಸಂತೋಷ್ ಕುಲಾಲ್, ದಿನೇಶ್ ಪೂಜಾರಿ, ಶೋಭಾ, ರಾಮದಾಸ್, ಹರೀಶ್, ರಾಮ ಕುಲಾಲ್, ರಘುನಾಥ್ ನಾಯ್ಕ್, ಸುಂದರ, ರಾಘವೆ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು.





