ಭ್ರಷ್ಟಾಚಾರದಲ್ಲಿ ನಿರತರಾಗಿರುವ ಬಿಜೆಪಿಗೆ ಪಾಠ ಕಲಿಸಬೇಕು: ಯುಟಿ ಖಾದರ್

ಉಳ್ಳಾಲ: ತಲಪಾಡಿ ಗ್ರಾಮ ವ್ಯಾಪ್ತಿಯ ಮಾದವಪುರದಿಂದ ಜಾಥಾ ನಡೆಸಿ ಮತಯಾಚನೆ ಮಾಡಲಾಗಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಲ್ಲದೆ ಬೇರೆ ಅಭ್ಯರ್ಥಿಗೆ ಇಲ್ಲಿ ಮತ ಕೇಳಲು ಅವಕಾಶ ಇಲ್ಲ. ಈ ಬಾರಿ ಚುನಾವಣೆ ಅತ್ಯಮೂಲ್ಯವಾಗಿದೆ. ಬಿಜೆಪಿ ಜನ ವಿರೋಧಿ ಸರ್ಕಾರ ವನ್ನು ಕೆಳಗಿಳಿಸುವ ಚುನಾವಣೆ ಆಗಿದೆ. ಜನಪರ ಕೆಲಸ ಮಾಡದ ಪಕ್ಷದ ಆಡಳಿತ ಯಾರು ಇಷ್ಟ ಪಡುವುದಿಲ್ಲ. ರೇಶನ್ ಕಾರ್ಡ್ ಸಹಿತ ಯಾವುದೇ ಕೆಲಸ ಬಿಜೆಪಿ ಮಾಡಲಿಲ್ಲ. ಅಲ್ಲದೇ ನಿರಾಶ್ರಿತರಿಗೆ ಆಶ್ರಯ ಒದಗಿಸಲು ಹಣ ಕೂಡ ಮಂಜೂರು ಮಾಡಲಿಲ್ಲ. ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ ಇಂದಿರಾ ಕ್ಯಾಂಟೀನ್ ನನ್ನು ಬಂದ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯುಟಿ ಖಾದರ್ ಹೇಳಿದರು.
ಅವರು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತಲಪಾಡಿ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಕೆಸಿರೋಡ್ ನಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರ ಬೆಲೆಯೇರಿಕೆ ಮಾಡಲು ಮಾತ್ರ ಕಲಿತಿದೆ ಹೊರತು ಇಳಿಕೆ ಮಾಡಲು ಅಲ್ಲ.ಈವರೆಗೆಸರ್ಕಾರ ದರ ಇಳಿಕೆ ಮಾಡಿಲ್ಲ. ಇದು ಜನಪರ ಆಡಳಿತವೇ ಎಂದು ಪ್ರಶ್ನಿಸಿದರು. ತೆರಿಗೆ ಮೇಲೆ ತೆರಿಗೆ ಹಾಕಿ ಲಾಭ ಮಾಡಿ ಭ್ರಷ್ಟಾಚಾರ ದಲ್ಲಿ ನಿರತರಾಗಿರುವ ಬಿಜೆಪಿ ಗೆ ಈ ಬಾರಿ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಚುನಾವಣಾ ಪ್ರಚಾರ ಪ್ರಯುಕ್ತ, ತಲಪಾಡಿ ಗ್ರಾಮ ವ್ಯಾಪ್ತಿಯ ಮಾದವಪುರದಿಂದ ಪಂಜಳ, ಪಿಲಿಕೂರು ರಸ್ತೆಯಾಗಿ ಕೆಸಿರೋಡ್ ವರೆಗೆ ಜಾಥಾ ನಡೆಯಿತು.
ಈ ಸಂದರ್ಭದಲ್ಲಿ ತಲಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್ ತಲಪಾಡಿ, ತಾ.ಪಂ.ಮಾಜಿ ಸದಸ್ಯ ಸುರೇಖಾ, ಆಳ್ವಿನ್ ಡಿಸೋಜ, ಸಿ.ಎಂ.ಫಾರೂಕ್, ರವಿರಾಜ್ ಶೆಟ್ಟಿ,ತಾ.ಪಂ.ಮಾಜಿ ಅಧ್ಯಕ್ಷ ಪಾವೂರು ಮೋನು, ಸಲೀಂ ಮೇಗ, ಬಿ.ಎಸ್ ಇಸ್ಮಾಯಿಲ್ ತಲಪಾಡಿ,ಟಿ.ಎಂ.ಇಬ್ರಾಹಿಂ ತಲಪಾಡಿ ಪಂಚಾಯತ್ ಸದಸ್ಯ ವೈಭವ ತಲಪಾಡಿ, ಅಬ್ದುಲ್ ಸಲಾಂ ಪಿಲಿಕೂರು, ಮುಸ್ತಫಾ ಹರೇಕಳ, ಸಚ್ಚಿದಾನಂದ ತಲಪಾಡಿ, ಶಬೀರ್ ತಲಪಾಡಿ, ಶಿವಪ್ರಸಾದ್ ಉಪಸ್ಥಿತರಿದ್ದರು. ಅಶ್ರಫ್ ಕೆಸಿರೋಡ್ ಕಾರ್ಯಕ್ರಮ ನಿರೂಪಿಸಿದರು.