Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಿಟಿ ರವಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ,...

ಸಿಟಿ ರವಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಸಂಸ್ಕೃತಿ ಅನ್ನುವುದು ಇಲ್ಲವೇ ಇಲ್ಲ: ಸಿದ್ದರಾಮಯ್ಯ

''ತಮ್ಮಯ್ಯ ಗೆಲುವು ಕಟ್ಟಿಟ್ಟಬುತ್ತಿ, ಸಿ.ಟಿ.ರವಿಗೆ ಸೋಲು ಖಚಿತ''

6 May 2023 9:20 PM IST
share
ಸಿಟಿ ರವಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಸಂಸ್ಕೃತಿ ಅನ್ನುವುದು ಇಲ್ಲವೇ ಇಲ್ಲ: ಸಿದ್ದರಾಮಯ್ಯ
''ತಮ್ಮಯ್ಯ ಗೆಲುವು ಕಟ್ಟಿಟ್ಟಬುತ್ತಿ, ಸಿ.ಟಿ.ರವಿಗೆ ಸೋಲು ಖಚಿತ''

ಚಿಕ್ಕಮಗಳೂರು, ಮೇ 6: ಅತಂತ್ರ ಬಹುಮತದಿಂದ ಸುಭದ್ರ ಸರಕಾರ ರಚನೆ ಸಾಧ್ಯವಿಲ್ಲ. ಅತಂತ್ರ ಬಹುಮತದ ಪರಿಣಾಮದಿಂದ ಈ ಹಿಂದೆ ರಚನೆಯಾದ ಸರಕಾರಗಳು ಸುಭದ್ರ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಸುಭದ್ರ ಆಡಳಿತದ ಹಿತದೃಷ್ಟಿಯಿಂದ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ತಾಲೂಕಿನ ಸಖರಾಯಪಟ್ಟಣದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 2004ರಲ್ಲಿ ಅತಂತ್ರ ಬಹುಮತದ ಪರಿಣಾಮ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾಗಿತ್ತು. ಆಗ ಧರ್ಮಸಿಂಗ್ ಸಿಎಂ ಆಗಿದ್ದರು. ಆ ಅವಧಿಯಲ್ಲಿ ಸುಭದ್ರ ಆಡಳಿತ ನೀಡಲು ಸಾಧ್ಯವಾಗಿಲ್ಲ. 2008ರಲ್ಲಿ ಅತಂತ್ರ ಬಹುಮತ ನೀಡಿದ ಪರಿಣಾಮ ಬಿಜೆಪಿ-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾಗಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ 20 ತಿಂಗಳು ಸಿಎಂ ಆಗಿದ್ದರು. ನಂತರ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ನೀಡದೇ ವಚನ ಭ್ರಷ್ಟರಾದರು. ಆಗಲೂ ಸುಭದ್ರ ಸರಕಾರ ರಚನೆ, ಸುಭದ್ರ ಆಡಳಿತ ಸಾಧ್ಯವಾಗಿಲ್ಲ. 2018ರಲ್ಲೂ ಅತಂತ್ರ ವಿಧಾನಸಭೆ ಪರಿಣಾಮ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದರೂ ಆಪರೇಷನ್ ಕಮಲದ ಪರಿಣಾಮ ಅಂದೂ ಸುಭದ್ರ ಸರಕಾರ ರಚನೆ ಸಾಧ್ಯವಾಗಿಲ್ಲ. 2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರ ಪರಿಣಾಮ ನನ್ನ ನೇತೃತ್ವದಲ್ಲಿ ಸುಭದ್ರ ಸರಕಾರ ರಚಿಸಿ, 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡುವಲ್ಲಿ ಸಾಧ್ಯವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮತದಾರರು ಸುಭದ್ರ ಸರಕಾರ, ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡಬೇಕು ಎಂದರು.

ಶಾಸಕ ಸಿ.ಟಿ.ರವಿ 4 ಬಾರಿ ಶಾಸಕನಾಗಿದ್ದೇನೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ಧೇನೆಂದು ಮೆರೆಯುತ್ತಿದ್ದಾನೆ, ನನ್ನನ್ನು ಸೋಲಿಸುವವರಿಲ್ಲ ಎಂಬ ಅಹಂಕಾರ ಆತನಿಗೆ ಬಂದಿದೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದ. ಆತನಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಸಂಸ್ಕೃತಿ ಅನ್ನುವುದೂ ಇಲ್ಲ. ರಾಜ್ಯದ ಎಂಎಲ್‍ಎಗಳಲ್ಲಿ ಸಿ.ಟಿ.ರವಿ ಕಡು ಭಷ್ಟ. ಆತ ಎಷ್ಟು ಎನ್ನುವುದಕ್ಕೆ ಈ ಕ್ಷೇತ್ರದ ಜನ ಆತನನನ್ನು ಕೋಟಿ ರವಿ, ಸಿ.ಟಿ.ರವಿ ಎಂದು ಕರೆಯುತ್ತಿರುವುದೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ರಾಜಕಾರಣ ಎಂದರೆ ಧ್ವೇಷ ಸಾಧಿಸುವುದು ಎಂದು ಸಿ.ಟಿ.ರವಿ ತಿಳಿದಿದ್ದಾನೆ. ಈ ಚುನಾವಣೆ ಬಳಿಕ ಸಿ.ಟಿ.ರವಿಯ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂದರು.

 ಬಿಜೆಪಿ ಸರಕಾರದ ದುರಾಡಳಿತ, ಭ್ರಷ್ಟಾಚಾರದಿಂದಾಗಿ ರಾಜ್ಯದ ಜನತೆ ರೋಸಿ ಹೋಗಿದ್ದಾರೆ. ಈ ಕಾರಣಕ್ಕೆ ಮತದಾರರು ಬದಲಾವಣೆ ಬಯಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿಯನ್ನೂ ಈ ಬಾರಿ ಬದಲಾಯಿಸುತ್ತಾರೆ. ನಾನು ಹೋದಲ್ಲೆಲ್ಲ ಕಾಂಗ್ರೆಸ್ ಪಕ್ಷದತ್ತ ಜನರ ಉತ್ಸಾಹ ಕಂಡು ಬೆರಗಾಗಿದ್ದೇನೆ. ಪಶ್ಚಿಮದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಅಷ್ಟೇ ಸತ್ಯ ಎಂದರು.

ಚಿಕ್ಕಮಗಳೂರು ಕ್ಷೇತ್ರದಲ್ಲಿ 6 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಅದರಲ್ಲಿ ಗಾಯತ್ರಿ ಶಾಂತೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆಕೆ ಎಮ್ಮೆಲ್ಸಿ ಆಗುವುದು ಖಚಿತವಾಗಿದ್ದರಿಂದ ಸಿ.ಟಿ.ರವಿ ಭ್ರಷ್ಟಾಚಾರದಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದ ಎಚ್.ಡಿ.ತಮ್ಮಯ್ಯ ಗೆಲ್ಲುವ ಅಭ್ಯರ್ಥಿಯಾಗಿದ್ದರಿಂದ ಟಿಕೆಟ್ ನೀಡಿದ್ದೇವೆ. ಎಲ್ಲ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟಿನಿಂದ ತಮ್ಮಯ್ಯ ಗೆಲ್ಲಿಸಲು ಪಣತೊಟ್ಟಿದ್ದು, ತಮ್ಮಯ್ಯ ಗೆಲುವು ಕಟ್ಟಿಟ್ಟಬುತ್ತಿ ಎಂದರು.

ನಾನು ಜಾತಿವಾದಿಯಲ್ಲ, ಜಾತ್ಯತೀತವಾದಿ, ಜಾತ್ಯತೀತ ತತ್ವ ಸಿದ್ಧಾಂತ ಕಾಂಗ್ರೆಸ್ ಪಕ್ಷದ್ದಾಗಿದೆ. ಅದೇ ಮನೋಭಾವ ನನ್ನದ್ದಾಗಿದೆ. ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವ ಪಕ್ಷ ಕಾಂಗ್ರೆಸ್ ಆಗಿದೆ. ಸಮಾಜವನ್ನು ಒಡೆದು ಆಳುವ ಸಿದ್ಧಾಂತ ನಮ್ಮದಲ್ಲ, ಅದು ಬಿಜೆಪಿ ಸಿದ್ಧಾಂತ ಎಂದ ಅವರು, ಸಮಾಜ ಒಡೆಯುವವರು ಸಮಾಜ ದ್ರೋಹಿಗಳು. ಹಿಂದು, ಮುಸ್ಲಿಂ, ಕ್ರೈಸ್ತರು ಎಂದು ಬಿಜೆಪಿಯವರು ಸಮಾಜ ಒಡೆಯುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ಪಾಲಿಗೆ ಹಿಂದೂ, ಮುಸ್ಲಿಂ, ಕ್ರೈಸ್ತರು ಎಂದರೆ ಈ ದೇಶದ ಪ್ರಜೆಗಳು, ಭಾರತೀಯರು ಆಗಿದ್ದಾರೆ. ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡಲ್ಲ ಎಂದ ಅವರು, ಪ್ರಧಾನಿ ಮೋದಿ ಅವರು ಸಬ್‍ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ, ಆದರೆ ಅವರು ಹೇಳುವುದು ಒಂದು, ಮಾಡುವುದು ಮತ್ತೊಂದು. ರಾಜ್ಯದಲ್ಲಿ ಶೇ.14ರಷ್ಟು ಮಸ್ಲಿಂ ಜನಸಂಖ್ಯೆ ಇದ್ದು, ಶೇ.2ರಷ್ಟು ಕ್ರೈಸ್ತರಿದ್ದಾರೆ. ಆದರೆ ಈ ಸಮುದಾಯದವರಿಗೆ ಬಿಜೆಪಿ ಒಂದೇ ಒಂದು ಟಿಕೆಟ್ ನೀಡಿಲ್ಲ. ಹಾಗಾದರೇ ಪ್ರಧಾನಿ ಮೋದಿಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವುದು ಬರೀ ಬೊಗಳೆಯಲ್ಲವಾ? ಎಂದು ಪ್ರಶ್ನಿಸಿದರು.

ನಾನು ಸಿಎಂ ಆಗಿದ್ದ ವೇಳೆ ವೇಳೆ ಕೊಟ್ಟಿದ್ದ 160 ಭರವಸೆಗಳಲ್ಲಿ 160 ಭರವಸೆಗಳನ್ನೂ ಈಡೇರಿಸಿದ್ದಲ್ಲದೇ ಹೆಚ್ಚುವರಿಯಾಗಿ 20 ಕಾರ್ಯಕ್ರಮಗಳನ್ನು ನೀಡಿದ್ದೆ. ಆದರೆ ಬಿಜೆಪಿಯವರು ಈ ಹಿಂದೆ ನೀಡಿದ್ದ ಸುಮಾರು 600 ಭರವಸೆಗಳಲ್ಲಿ ಶೇ.50ರಷ್ಟು ಭರವಸೆಯನ್ನೂ ಈಡೇರಿಸಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೇ ಬಿಜೆಪಿಯವರು ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಜನತೆ ನೀಡಿದ ಅಧಿಕಾರವನ್ನು ಭ್ರಷ್ಟಾಚಾರ, 40ಪರ್ಸೆಂಟ್ ಕಮಿಶನ್ ದಂಧೆ ನಡೆಸಲು ಬಳಸಿಕೊಂಡಿದ್ದಾರೆ ಎಂದ ಅವರು, ನಾನು ಸಿಎಂ ಆಗಿದ್ದ ವೇಳೆ ನೀಡಿದ್ದ ಹಲವಾರು ಭಾಗ್ಯಗಳನ್ನು ಜಾತಿ, ಧರ್ಮ ನೋಡಿ ನೀಡಿಲ್ಲ. ಎಲ್ಲರಿಗೂ ಸಮಾನವಾದ ಯೋಜನೆಗಳನ್ನು ನೀಡಿದ್ದೇವೆ. ಬಿಜೆಪಿಯವರು ನಾವು ನೀಡಿದ್ದ ಯೋಜನೆಗಳಿಗೆ ಕತ್ತರಿ ಹಾಕಿ ಬಡವರ ಬದುಕನ್ನು ನರಕ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಆಗ ಎಲ್ಲ ಭಾಗ್ಯಗಳನ್ನು ಮತ್ತೆ ನೀಡುವುದರೊಂದಿಗೆ ಕಾಂಗ್ರೆಸ್ ಪಕ್ಷ ನೀಡಿರುವ 5 ಗ್ಯಾರಂಟಿ ಯೋಜನೆಗಳನ್ನು ತಪ್ಪದೇ ಜಾರಿ ಮಾಡಲಾಗುವುದು. ಇದರೊಂದಿಗೆ ಆಶಾ, ಅಂಗನವಾಡಿ, ಬಿಸಿಯೂಟ ಸಿಬ್ಬಂದಿಯನ್ನು ಖಾರ್ಯ ಮಾಡಿ ವೇತನವನ್ನು ಹೆಚ್ಚಳ ಮಾಡಲಾಗುವುದು. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ನೀರಾವರಿಗೆ 1.50 ಲಕ್ಷ ಕೋಟಿಯನ್ನು 5 ವರ್ಷಗಳಲ್ಲಿ ವಿನಿಯೋಗಿಸಲಾಗುವುದು. ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳನ್ನು ಜಾರಿ ಮಾಡಿ ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗುವುದು. ಈ ಎಲ್ಲ ಯೋಜನೆಗಳ ಜಾರಿಗೆ ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನಗಳ ಬಹುಮತ ನೀಡಬೇಕು. ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿ.ಎಲ್.ಶಂಕರ್, ಗಾಯತ್ರಿ ಶಾಂತೇಗೌಡ. ಅಭ್ಯರ್ಥಿ ಎಚ್.ಡಿ.ತಮ್ಮಯ್ಯ, ಮುಖಂಡರಾದ ಬಿ.ಎಂ.ಸಂದೀಪ್, ಡಾ.ಅಂಶುಮಂತ್, ಡಾ.ವಿಜಯ್‍ಕುಮಾರ್, ಎಚ್.ಪಿ.ಮಂಜೇಗೌಡ, ಮಹಡಿಮನೆ ಸತೀಶ್, ಬಿ.ಎಚ್.ಹರೀಶ್, ನಯಾಜ್ ಅಹ್ಮದ್, ಎಚ್.ಎಚ್.ದೇವರಾಜ್, ಎ.ಎನ್.ಮಹೇಶ್, ಡಾ.ವಿನಾಯಕ್, ರೇಖಾ ಹುಲಿಯಪ್ಪಗೌಡ, ಶಿವಸ್ವಾಮಿ, ಅಕ್ಮಲ್, ರವೀಶ್ ಮತ್ತಿತರರು ಉಪಸ್ಥಿತರಿದ್ದರು.

'ಮೀಸಲಾತಿ ಹೆಚ್ಚಳ ಎನ್ನುವುದು ಬಿಜೆಪಿಯವರ ಚುನಾವಣಾ ಗಿಮಿಕ್ ಆಗಿದೆ. ಈ ಮೂಲಕ ಶೋಷಿತ ಸಮುದಾಯಗಳ ಮೂಗಿಗೆ ತುಪ್ಪ ಹಚ್ಚಿದ್ದಾರೆ. ಅಲ್ಪಸಂಖ್ಯಾತರ ಶೇ.4 ಮೀಸಲಾತಿಯನ್ನು ರದ್ದು ಮಾಡಿ ಲಿಂಗಾಯತರಿಗೆ, ಒಕ್ಕಲಿಗರಿಗೆ ತಲಾ ಶೇ.2 ಮೀಸಲಾತಿ ನೀಡಿದ್ದೇವೆ ಎನ್ನುವದೂ ಕೂಡ ಚುನಾವಣಾ ಗಿಮಿಕ್ ಎಂದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ.50ರಷ್ಟಿರುವ ಮೀಸಲಾತಿಗೆ ತಿದ್ದುಪಡಿ ತಂದು, ಮೀಸಲಾತಿಯನ್ನು ಶೇ.70 ಕ್ಕೆ ಏರಿಸಿ ಎಲ್ಲ ಜಾತಿ, ಜನಾಂಗದವರಿಗೆ ಮೀಸಲಾತಿ ನೀಡಲಾಗುವುದು'.

- ಸಿದ್ದರಾಮಯ್ಯ, 
 

share
Next Story
X