ಉಡುಪಿ: ಆನ್‌ಲೈನ್ ಜಾಬ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ

ಉಡುಪಿ, ಮೇ 6: ಆನ್‌ಲೈನ್ ಜಾಬ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರಕೂರು ಹೆರಾಡಿ ನಿವಾಸಿ ಆಸ್ಟಿನ್ ಪ್ರದೀಪ್ ಅಲ್ಮೇಡಾ(33) ಎಂಬವರಿಗೆ ಎ.18ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ಆನ್‌ಲೈನ್ ಜಾಬ್ ಬಗ್ಗೆ ಸಂದೇಶ ಕಳುಹಿಸಿದ್ದನು. ಬಳಿಕ ಗೂಗಲ್ ರಿವೀವ್ ಟಾಸ್ಕ್ ಕಪ್ಲೀಟ್ ಮಾಡಿ ಹೆಚ್ಚಿನ ಬೋನಸ್ ಹಣ ಪಡೆಯುವ ಬಗ್ಗೆ ಟೆಲಿಗ್ರಾಮ್ ನಲ್ಲಿ ಸಂದೇಶ ಕಳುಹಿಸಿದ್ದನು. ಟಾಸ್ಕ್ ಬಗ್ಗೆ ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ನೀಡಿದ್ದು, ಅದರಂತೆ ಆಸ್ಟಿನ್, ವಿವಿಧ ಹಂತದಲ್ಲಿ ಒಟ್ಟು 2,70,340ರೂ. ಹಣ ವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದನು. ಆದರೆ ಆ ವ್ಯಕ್ತಿ ಆಸ್ಟಿನ್ ಅವರನ್ನು ನಂಬಿಸಿ, ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story