ಶಿರ್ವ: ದರೋಡೆಗೆ ಸಂಚು ಆರೋಪ; ಆರು ಮಂದಿ ಬಂಧನ

ಶಿರ್ವ, ಮೇ 6: ದರೋಡೆಗೆ ಹೊಂಚು ಹಾಕುತ್ತಿದ್ದ ಆರು ಮಂದಿ ಆರೋಪಿಗಳನ್ನು ಶಿರ್ವ ಪೊಲೀಸರು ಮೇ 5ರಂದು ತಡರಾತ್ರಿ ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ ದ್ವಾರದ ಬಳಿ ಬಂಧಿಸಿದ್ದಾರೆ.
ಮಂಚಿಕೆರೆಯ ಇಕ್ಬಾಲ್ ಅಹಮ್ಮದ್(32), ಕಿನ್ನಿಮುಲ್ಕಿಯ ಪರ್ವೇಝ್ (24), ಹೂಡೆಯ ಅಬ್ದುಲ್ ರಾಕೀಬ್(20), ಮುಹಮ್ಮದ್ ಸಕ್ಲೇನ್(23), ನೇಜಾರಿನ ಸಲೇಮ್ ಸಲೀಂ(19), ಅನಾಸ್(19) ಬಂಧಿತ ಆರೋಪಿಗಳು.
ಇವರಿಂದ ಡ್ರಾಗನ್, ಮೆಣಸಿನ ಹುಡಿ ಪ್ಯಾಕೆಟ್, ಮರದ ವಿಕೆಟ್, ಮೂರು ದ್ವಿಚಕ್ರ ವಾಹನ ಹಾಗೂ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2,31,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story