ರಶ್ಯ ಹೈಪರ್ಸಾನಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದ ಉಕ್ರೇನ್

ಕೀವ್,ಮೇ 6: ಉಕ್ರೇನ್ ರಾಜಧಾನಿ ಕೀವ್ನೆಡೆಗೆ ಉಡಾಯಿಸಲ್ಪಟ್ಟಿದ್ದ ರಶ್ಯದ ಹೈಪರ್ಸಾನಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ಉಕ್ರೇನಿ ವಾಯುಪಡೆ ಶನಿವಾರ ತಿಳಿಸಿದೆ. ಅಮೆರಿಕದಿಂದ ಪಡೆದುಕೊಂಡಿರುವ ಅತ್ಯಾಧುನಿಕ ಪ್ಯಾಟ್ರಿಯಾಟ್ ರಕ್ಷಣಾ ವ್ಯವಸ್ಥೆಯ ಮೂಲಕ ರಶ್ಯನ್ ಕ್ಷಿಪಣಿಯನ್ನು ಪತನಗೊಳಿಸಿರುವುದಾಗಿ ಅದು ಹೇಳಿದೆ. ಮಾಸ್ಕೊದ ಅತ್ಯಂತ ಅಧುನಿಕ ಕ್ಷಿಪಣಿಗಳಲ್ಲೊಂದನ್ನು ಭೇದಿಸುವಲ್ಲಿ ಉಕ್ರೇನ್ ಶಕ್ತವಾಗಿರುವುದು ಇದು ಮೊದಲ ಸಲವಾಗಿದೆ.
ಉಕ್ರೇನ್ ರಾಜಧಾನಿ ಕೀವ್ ಮೇಲೆ ರಶ್ಯವು ಮೇ 4ರ ನಡುರಾತ್ರಿ ವೇಳೆ ಉಡಾವಣೆಗೊಳಿಸಿದ ಕಿಂಝಾಲ್ ಮಾದರಿಯ ಕ್ಷಿಪಣಿಯನ್ನು ಉಕ್ರೇನ್ ಅಡ್ಡಗಟ್ಟಿ, ಭೇದಿಸಿರುವುದಾಗಿ ವಾಯುಪಡೆಯ ಕಮಾಂಡರ್ ಮಿಕೊಲಾ ಓಲೆಶ್ಚುಕ್ ತಿಳಿಸಿದ್ದಾರೆ.
ರಶ್ಯನ್ ಪ್ರಾಂತದಿಂದ ಮಿಗ್31ಕೆ ವಿಮಾನದ ಮೂಲಕ ಉಡಾವಣೆಗೊಳಿಸಲಾಗಿದ್ದ ಕಿಂಝಾಲ್ (ಕೆ-ಎಚ್47) ಕ್ಷಿಪಣಿಯ ಪ್ಯಾಟ್ರಿಯಾಟ್ ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ ಎಂದವರು ಹೇಳಿದ್ದಾರೆ.
Next Story