ಗೋವಾ ಭೇಟಿ ಯಶಸ್ವಿ: ಬಿಲಾವಲ್ ಭುಟ್ಟೋ ಝರ್ದಾರಿ

ಇಸ್ಲಾಮಾಬಾದ್,ಮೇ 6: ತನ್ನ ಗೋವಾ ಭೇಟಿಯು ಯಶಸ್ವಿಯಾಗಿದ್ದು, ಭಾರತದ ನೆಲದಲ್ಲಿ ತನ್ನ ದೇಶದ ವಿಷಯವನ್ನು ಯಶಸ್ವಿಯಾಗಿ ಪ್ರತಿಪಾದಿಸಿರುವುದಾಗಿ ಪಾಕ್ ವಿದೇಶಾಂಗ ಸಚಿವ, ಬಿಲಾವಲ್ ಭುಟ್ಟೋ ಝರ್ದಾರಿ ಶುಕ್ರವಾರ ತಿಳಿಸಿದ್ದಾರೆ.
ಝರ್ದಾರಿ ಅವರನ್ನು ಭಯೋತ್ಪಾದನಾ ಉದ್ಯಮದ ಪ್ರವರ್ತಕ, ಸಮರ್ಥಕ ಹಾಗೂ ವಕ್ತಾರನೆಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಪಾದಿಸಿದ ಕೆಲವೇ ತಾಸುಗಳ ಬಳಿಕ ಝರ್ದಾರಿ ಈ ಹೇಳಿಕೆ ನೀಡಿದ್ದಾರೆ.
ಗೋವಾದಲ್ಲಿ ಶನಿವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡ ಬಿಲಾವಲ್ ಭುಟ್ಟೋ ಝರ್ದಾರಿ ಅವರು ಶನಿವಾರ ಇಸ್ಲಾಮಾಬಾದ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ತನ್ನ ಭಾರತ ಭೇಟಿಯು ಯಶಸ್ವಿಯಾಗಿದ್ದು, ಜಾಗತಿಕ ಮುಸ್ಲಿಂ ಸಮುದಾಯದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಭಾವನೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಯಿತೆಂದು ಹೇಳಿದ್ದು.
ರಾಜತಾಂತ್ರಿಕವಾಗಿ ಮೇಲುಗೈ ಸಾಧಿಸುವುದಕ್ಕಾಗಿ ಭಯೋತ್ಪಾದನೆಯ ವಿಷಯವನ್ನು ಅಸ್ತ್ರವಾಗಿ ಬಳಸಬಾರದೆಂಬ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಬಿಲಾವಲ್ ಭುಟ್ಟೋ ಅವರ ಹೇಳಿಕೆಯನ್ನು ಸಚಿವ ಎಸ್.ಜೈಶಂಕರ್ ಬಲವಾಗಿ ಖಂಡಿಸಿದ್ದರು.
ಭಯೋತ್ಪಾದನೆ ಶಸ್ತ್ರೀಕರಣವೆಂಬ ಬಿಲಾವಲ್ ಅವರ ಹೇಳಿಕೆ.ಯು ಅವರ ಮನಸ್ಥಿತಿಯನ್ನು ಅಪ್ರಜ್ಞಾಪೂರ್ವಕವಾಗಿ ಅನಾವರಣಗೊಳಿಸಿದೆ ಎಂದು ಜೈಶಂಕರ್ ಹೇಳಿದ್ದರು.