ಚುನಾವಣೆ ನಂತರ ಜನರ ಪರ ಸೇವೆ ಮಾಡಲು ಸಿದ್ಧ: ಯು.ಟಿ.ಖಾದರ್ ಭರವಸೆ

ಉಳ್ಳಾಲ: ಚುನಾವಣೆ ನಂತರ ಜನರ ಪರ ಸೇವೆ ಮಾಡಲು ಸಿದ್ಧನಿದ್ದೇನೆ. ಅಭಿವೃದ್ಧಿ ನಮ್ಮ ಗುರಿ ಆಗಿದೆ. ಅದನ್ನು ಈಡೇರಿಸುವ ಕೆಲಸ ನಮ್ಮದು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ ಸಿಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ವತಿಯಿಂದ ಕೋಟೆಪುರದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಎಸ್ ಡಿಪಿಐ ಅಭಿವೃದ್ಧಿ ಗುರಿಯಲ್ಲ, ಕಾಂಗ್ರೆಸ್ ನನ್ನು ಸೋಲಿಸಿ ಕೋಮುವಾದಿ ಗಳಿಗೆ ಅವಕಾಶ ಮಾಡುವುದು ಅವರ ಗುರಿ. ಈ ಕಾರಣದಿಂದ ಅವರು ಮಂಗಳೂರು, ಬಂಟ್ವಾಳ, ಮೂಡುಬಿದಿರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿಯದ್ದು ಭ್ರಷ್ಟಾಚಾರ ಆಡಳಿತ ಆದರೆ ಎಸ್ ಡಿಪಿಐ ಯ ಗುರಿ ಕೂಡಾ ಜನ ವಿರೋಧಿ ನೀತಿ ಆಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕಿ ಭವ್ಯ ಗಂಗಾಧರ, ತಾ.ಪಂ.ಮಾಜಿ ಸದಸ್ಯ ಮುಸ್ತಫಾ ಮಲಾರ್ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಫಾರೂಕ್ ಉಳ್ಳಾಲ್, ನಾಸೀರ್ ಅಹ್ಮದ್ ಸಾಮಣಿಗೆ, ಯೂಸುಫ್ ಉಳ್ಳಾಲ, ಸದಾಶಿವ ಉಳ್ಳಾಲ್, ಮೌಸೀರ್ ಸಾಮಣಿಗೆ, ಹಸೈನಾರ್, ಹರ್ಷಾದ್ ವರ್ಕಾಡಿ, ರಶೀದ್ ಕೋಡಿ, ಸಲೀಂ ಯು.ಬಿ., ಮುಸ್ತಫಾ ಉಳ್ಳಾಲ, ಮಯ್ಯದ್ದಿ, ಇಸ್ಮಾಯಿಲ್ ಮೇಲಂಗಡಿ, ಅಶ್ರಫ್ ಕೋಡಿ, ಅಝೀಝ್ ಕೋಡಿ, ಹಮೀದ್ ಕೋಡಿ, ಸಮದ್ ಕೋಡಿ, ಫಯಾಝ್, ನಝೀರ್ ಕೋಡಿ ಉಪಸ್ಥಿತರಿದ್ದರು.








