ಮಂಗಳೂರು ನಗರದ ದಕ್ಷಿಣ: ಎಎಪಿ ಅಭ್ಯರ್ಥಿ ಸಂತೋಷ್ ಕಾಮತ್ ಪರ ಮತ ಯಾಚನೆ

ಮಂಗಳೂರು, ಮೇ 7: ಸ್ವಾರ್ಥರಹಿತ, ಜನ ಹಿತ ಕೆಲಸ ಮಾಡಲು ಇಚ್ಛಿಸುವವರೆಲ್ಲರೂ ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಬೇಕು. ನಾವೆಲ್ಲಾ ಒಂದಾಗಿ ಸುಂದರ ನಾಡನ್ನು ಕಟ್ಟಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ಹಿತೈಷಿ, ಪೋಷಕ ಹಾಗೂ ಅನಿವಾಸಿ ಉದ್ಯಮಿ ಮೈಕಲ್ ಡಿಸೋಜ ಹೇಳಿದ್ದಾರೆ.
ಮಂಗಳೂರು ನಗರದ ದಕ್ಷಿಣದ ಎಎಪಿ ಅಭ್ಯರ್ಥಿ ಸಂತೋಷ ಕಾಮತ್ ಪರವಾಗಿ ನಗರದ ಬಸ್ತಿ ಗಾರ್ಡನ್‌ನಿಂದ ಲೋವರ್ ಕಾರ್‌ಸ್ಟ್ರೀಟ್ ತನಕ ರವಿವಾರ ನಡೆದ ಮನೆ ಮನೆ ಪ್ರಚಾರದಲ್ಲಿ ಭಾಗವಹಿಸಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಸ್ಟೀಫನ್ ಪಿಂಟೋ, ಪ್ರಸಾದ್ ಬಜಿಲಕೆರಿ, ವೆಂಕಟೇಶ ಬಾಳಿಗಾ, ಜೈದೇವ ಶೆಣೈ, ನಝೀರ್ ಅಹ್ಮದ್, ಹಮೀದ್ ಪಡೀಲ್, ವಾಸುದೇವ್ ಕುಲಶೇಖರ ಮತ್ತಿತರರು ಉಪಸ್ಥಿತರಿದ್ದರು.
Next Story