ಪ್ರಚೋದನಕಾರಿ ಭಾಷಣ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ಗಂಗೊಳ್ಳಿ, ಮೇ 7: ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಚುನಾ ವಣಾ ನೀತಿ ಸಂಹಿತೆ ಉಲ್ಲಂಘಿಸಿ ರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 5ರಂದು ಗಂಗೊಳ್ಳಿಯ ಮಲ್ಯಾರಬೆಟ್ಟು ಎಂಬಲ್ಲಿ ಶ್ರೀಧರ ಶೇರಿಗಾರ, ರಾಘವೇಂದ್ರ ಮ್ಯಾಣೆ, ರಾಮಪ್ಪ ಖಾರ್ವಿ, ಯಶವಂತ್ ಖಾರ್ವಿ ಮತ್ತು ಇತರರು ಸೇರಿ ಸಾರ್ವಜನಿಕ ಸ್ಥಳದಲ್ಲಿ ಚುನಾವಣಾ ಪ್ರಚಾರದ ಹೆಸರಿನಲ್ಲಿ ಯಾವುದೇ ಅನುಮತಿಯನ್ನು ಪಡೆಯದೇ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಶ್ರೀಧರ ಎಂಬವರು ಸಾರ್ವಜನಿಕರ ನ್ನುದ್ದೇಶಿಸಿ ಉದ್ರೇಕಕಾರಿ ಭಾಷಣವನ್ನು ಮಾಡುವ ಮೂಲಕ ಒಂದು ನಿರ್ದಿಷ್ಟ ಧರ್ಮವನ್ನು ಎತ್ತಿ ಕಟ್ಟುವುದು, ಚುನಾವಣಾ ಸಮಯದಲ್ಲಿ ಕೋಮುಗಲಭೆ, ದೊಂಬಿ ಉಂಟಾಗುವ ಸಾಧ್ಯತೆ ಇರುವುದಾಗಿದೆ ದೂರಲಾಗಿದೆ. ಅಲ್ಲದೆ ಆರೋಪಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
Next Story