ದ.ಕ.: ನೀಟ್ ಪರೀಕ್ಷೆ ಸುಸೂತ್ರ

ಮಂಗಳೂರು, ಮೇ 7: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ದ.ಕ.ಜಿಲ್ಲೆಯ 17 ಕೇಂದ್ರಗಳಲ್ಲಿ ರವಿವಾರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯು ಸುಸೂತ್ರವಾಗಿ ನಡೆಯಿತು.
ದ.ಕ ಜಿಲ್ಲೆಯಲ್ಲಿ 8,291 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದು, ಮಧ್ಯಾಹ್ನ ಬಳಿಕ ಪರೀಕ್ಷೆ ಆರಂಭಗೊಂಡಿತು. ಆದರೆ ಬೆಳಗ್ಗಿನಿಂದಲೇ ಪರೀಕ್ಷಾ ಕೇಂದ್ರಗಳಿಗೆ ಪುತ್ತೂರು, ಮೂಡುಬಿದಿರೆ ಮತ್ತಿತರ ಭಾಗದಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.
ದ.ಕ. ಜಿಲ್ಲೆಯ ಕಾಲೇಜಿನಲ್ಲಿ ಕಲಿಯುವ ಗುಲ್ಬರ್ಗಾ, ಹಾಸನ ಮತ್ತಿತರ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನೀಟ್ ಪರೀಕ್ಷಾ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಹಾಗೂ ಐಡಿ ದಾಖಲೆಯನ್ನು ಕಾಲೇಜಿನ ಪ್ರವೇಶದ್ವಾರದಲ್ಲೇ ಪರಿಶೀಲಿಸಿ ಒಳಬಿಡಲಾಗಿತ್ತು.ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ಗಡಿಯಾರ, ಇಯರ್ ಫೋನ್, ಆಭರಣಗಳಿಗೆ ಪರೀಕ್ಷೆಯಲ್ಲಿ ನಿರ್ಬಂಧ ಹೇರಲಾಗಿತ್ತು.
Next Story