ಕೆ.ಎಸ್ ಹೆಗ್ಡೆ ಆಸ್ಪತ್ರೆ ಆಶ್ರಯದಲ್ಲಿ ಯುರಾಲಜಿ ಸಮ್ಮೇಳನ

ಕೊಣಾಜೆ: ಯುವ ಮೂತ್ರಶಾಸ್ತ್ರಜ್ಞರು ಪ್ರಸ್ತುತ ವಿಶೇಷಯುತ ಕೌಶಲ್ಯಗಳನ್ನು ವೃದ್ಧಿಸಿಕೊಂಡು, ನಾವೀನ್ಯತೆ ಗಳನ್ನು ಚಿಕಿತ್ಸಾ ವಿಧಾನದಲ್ಲಿ ಅಳವಡಿಸಿಕೊಂಡಾಗ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸಲು ಸಾಧ್ಯ ಎಂದು ಮುಂಬೈನ ಹಿರಿಯ ಯುರಾಲಾಜಿಸ್ಟ್ ಡಾ. ರುಪಿನ್ ಶಾಹ್ ಅಭಿಪ್ರಾಯಪಟ್ಟರು
ಅವರು ನಿಟ್ಟೆ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಆಶ್ರಯದಲ್ಲಿ ದೇರಳಕಟ್ಟೆ ಆವಿಷ್ಕಾರ ಸಭಾಂಗಣದಲ್ಲಿ ಯುರಾಲಜಿ ವಿಭಾಗದ ಆಶ್ರಯದಲ್ಲಿ ಯುರಲಾಜಿಕಲ್ ಅಸೋಸಿಯೇಷನ್ ಆಫ್ ಕೇರಳ ಇದರ ಮಧ್ಯಾವಧಿ ಸಮ್ಮೇಳನ (ಆಂಡ್ರಾಲಜಿ ಟ್ಯೂಟಲೇಜ್) ಗೆ ಚಾಲನೆಯನ್ನು ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಎಂ.ಶಾಂತಾರಾಮ್ ಶೆಟ್ಟಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಕ್ಕಳಾಗದ ಸಂದರ್ಭ ಮಹಿಳೆಯರನ್ನೇ ದೂಷಿಸುವುದು ಸಾಮಾನ್ಯವಾಗಿದೆ. ಆದರೆ ಉನ್ನತೀಕರಿಸಿದ ಚಿಕಿತ್ಸಾ ವಿಧಾನದಲ್ಲಿ ಪುರುಷರ ಅಂಶಗಳನ್ನು ಪರಿಶೀಲಿಸಿ ಚಿಕಿತ್ಸಾ ವಿಧಾನ ಪರಿಣಾಮಕಾರಿಯಾಗಿದೆ. ಶೀಘ್ರವೇ ಕ್ಷೇಮದಲ್ಲೂ ರೊಬೊಟಿಕ್ ಸರ್ಜರಿಯೂ ಆರಂಭವಾಗಲಿದೆ. ಆರ್ಥಪೆಡಿಕ್ಸ್ ಹಾಗೂ ಯುರಲಾಜಿ ವಿಭಾಗಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿದೆ. ಹಿಂದೆ ಕಾರ್ಯಗಾರಗಳು, ಸಮ್ಮೇಳನಗಳಿಲ್ಲದೆ ಬೋಧಕರ ಬೋಧನೆಯಿಂದ ಕಲಿತು ರೋಗಿಗಳ ಚಿಕಿತ್ಸೆ ನೀಡಬೇಕಿತ್ತು. ಈಗಿನ ಯುವವೈದ್ಯರಿಗೆ ವಿಪುಲ ಅವಕಾಶಗಳಿದ್ದು, ಜ್ಞಾನ ಸಂಪಾದನೆಗೆ ಹಲವು ದಾರಿಗಳಿದ್ದು, ಅಂತರಾಷ್ಟ್ರೀಯ ಮಟ್ಟದ ಜ್ಞಾನವನ್ನು ಪ್ರತಿ ಸಂದರ್ಭದಲ್ಲೂ ಪಡೆಯಬಹುದು ಎಂದರು.
ಯುರಲಾಜಿಕಲ್ ಸೊಸೈಟಿ ಆಫ್ ಇಂಡಿಯ ಇದರ ಕಾರ್ಯದರ್ಶಿ ಡಾ. ಜಿ.ಜಿ ಲಕ್ಷ್ಮಣ್ ಪ್ರಭು ಮಾತನಾಡಿ, ಶುದ್ಧ ಶಿಕ್ಷಣದ ಪಾಲನೆ, ಮಾಹಿತಿಗಳು ತಾರ್ಕಿಕವಾಗಿರುತ್ತದೆ, ಅದುವೇ ವಿಜ್ಞಾನವೆಂಬುದು ಸಾಬೀತಾಗಿದೆ ಎಂದರು.
ದಕ್ಷಿಣ ಭಾಗದ ಯುರಲಾಜಿಸ್ಟ್ ಅಸೋಸಿಯೇಷನ್ನಿನ ಅಧ್ಯಕ್ಷ ಡಾ.ಅವ್ಡಿಯಪ್ಪನ್, ಕೇರಳ ಯುರಾಲಾಜಿಕಲ್ ಅಸೋಸಿಯೇಷನ್ನಿನ ಡಾ.ಫೆಲಿಕ್ಸ್ ಕಾರ್ಡೋಝ , ಯುರಾಲಜಿ ಅಸೋಸಿಯೇಷನ್ ಕೇರಳದ ಸೆಕ್ರಟರಿ ಡಾ.ವಿಜಯ್ ರಾಧಾಕೃಷ್ಣನ್, ಯುರಾಲಜಿ ವಿಭಾಗದ ಪ್ರೊ. ಡಾ.ಟಿ.ಪಿ ರಾಜೀವ್ ಉಪಸ್ಥಿತರಿದ್ದರು.