ವಿಶ್ವಸಂಸ್ಥೆ ನಿರ್ಣಯದ ಪ್ರಕಾರ ಕಾಶ್ಮೀರ ವಿಷಯ ಬಗೆಹರಿಯಲಿ: ಚೀನಾ

ಬೀಜಿಂಗ್, ಮೇ 7: ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದವು ಇತಿಹಾಸದಿಂದ ಉಳಿದುಕೊಂಡು ಬಂದಿದೆ ಮತ್ತು ಇದನ್ನು ವಿಶ್ವಸಂಸ್ಥೆಯ ನಿರ್ಣಯದ ಅನುಸಾರವೇ ಬಗೆಹರಿಸಬೇಕು. ಈ ವಿಷಯದಲ್ಲಿ ಯಾವುದೇ ಏಕಪಕ್ಷೀಯ ಕ್ರಮ ಸರಿಯಲ್ಲ ಎಂದು ಚೀನಾ ಹೇಳಿದೆ.
ಪಾಕ್ಗೆ ಭೇಟಿ ನೀಡಿರುವ ಚೀನಾದ ವಿದೇಶಾಂಗ ಸಚಿವ ಖ್ವಿನ್ ಗಾಂಗ್ `ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯ ಸನದು, ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದದ ಅನುಸಾರ ಸೂಕ್ತವಾಗಿ ಮತ್ತು ಶಾಂತಿಯುತವಾಗಿ ಬಗೆಹರಿಸಬೇಕು ಎಂಬುದು ನಮ್ಮ ಆಶಯವಾಗಿದೆ' ಎಂದಿದ್ದಾರೆ.
Next Story