ಅರಬ್ ಲೀಗ್ಗೆ ಸಿರಿಯಾ ಮರುಪ್ರವೇಶಕ್ಕೆ ಸಮ್ಮತಿ

ದುಬಾಯ್, ಮೇ 7: ಸುಮಾರು 10 ವರ್ಷದ ಬಳಿಕ ಅರಬ್ ಲೀಗ್ಗೆ ಸಿರಿಯಾ ಮರುಪ್ರವೇಶಿಸುವುದಕ್ಕೆ ಅರಬ್ ಲೀಗ್ನ ವಿದೇಶಾಂಗ ಸಚಿವರು ನಿರ್ಧರಿಸಿದ್ದಾರೆ ಎಂದು ಅರಬ್ ಲೀಗ್ನ ವಕ್ತಾರರು ಹೇಳಿದ್ದಾರೆ.
ಕೈರೋದಲ್ಲಿ ಲೀಗ್ನ ಕೇಂದ್ರ ಕಚೇರಿಯಲ್ಲಿ ನಡೆದ ಅರಬ್ ವಿದೇಶಾಂಗ ಸಚಿವರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಲೀಗ್ನ ಪ್ರಧಾನ ಕಾರ್ಯದರ್ಶಿಯ ವಕ್ತಾರರು ಹೇಳಿದ್ದಾರೆ. ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸದ್ ವಿರುದ್ಧ 2011ರಲ್ಲಿ ನಡೆದಿದ್ದ ಪ್ರತಿಭಟನೆಯನ್ನು ಮಾರಣಾಂತಿಕವಾಗಿ ಹತ್ತಿಕ್ಕಿದ ಬಳಿಕ ದೇಶದಲ್ಲಿ ಅಂತರ್ಯುದ್ಧ ಭುಗಿಲೆದ್ದಿತ್ತು. ಇದರ ಬಳಿಕ ಸಿರಿಯಾವನ್ನು ಅರಬ್ ಲೀಗ್ನಿಂದ ಅಮಾನತುಗೊಳಿಸಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಸೌದಿ ಅರೆಬಿಯಾ, ಈಜಿಪ್ಟ್ ಸೇರಿದಂತೆ ಹಲವು ಅರಬ್ ರಾಜ್ಯಗಳು ಸಿರಿಯಾದೊಂದಿಗೆ ರಾಜತಾಂತ್ರಿಕ ಸಂಬಂಧ ಮರುಸ್ಥಾಪಿಸಲು ಒಲವು ತೋರಿವೆ.
Next Story