ಪೆರು: ಚಿನ್ನದ ಗಣಿಯಲ್ಲಿ ಅಗ್ನಿ ದುರಂತ, 27 ಕಾರ್ಮಿಕರು ಮೃತ್ಯು

ಯಾನಾಕ್ವಿಹುವಾ( ಪೆರು): ದಕ್ಷಿಣ ಪೆರುವಿನ ಚಿನ್ನದ ಗಣಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 27 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ,
ಇದು ದಕ್ಷಿಣ ಅಮೆರಿಕಾದ ದೇಶದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಗಣಿಗಾರಿಕೆ ದುರಂತವಾಗಿದೆ.
"ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಮತ್ತು ಅದರಿಂದ ಸ್ಫೋಟ ಸಂಭವಿಸಿದೆ ಎಂದು ನಮಗೆ ತಿಳಿದಿದೆ. ಈ ಘಟನೆಯಿಂದ ನಾವು ತುಂಬಾ ಆಘಾತಕ್ಕೊಳಗಾಗಿದ್ದೇವೆ" ಎಂದು ಫ್ರಾನ್ಸಿಸ್ಕೊ ಇಡ್ಮೆ ಮಾಮಾನಿ ಹೇಳಿದರು, ಅವರ 51 ವರ್ಷದ ಸಹೋದರ ಫ್ರೆಡೆರಿಕೊ ಸಹ ಸಾವನ್ನಪ್ಪಿದ್ದಾರೆ.
ಅರೆಕ್ವಿಪಾ ಪ್ರದೇಶದ ಲಾ ಎಸ್ಪೆರಾನ್ಜಾ 1 ಗಣಿಯ ಸುರಂಗದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ದೃಢಪಡಿಸಿದೆ.
Next Story