ತಮ್ಮ ಹಕ್ಕಿಗಾಗಿ ಕನ್ನಡಿಗರು ಗುಲಾಮರಾಗಿ ಕೈಕಟ್ಟಿದ ಇತಿಹಾಸವೇ ಇಲ್ಲ: ಜೆ.ಪಿ ನಡ್ಡಾಗೆ ಬಿ.ಕೆ ಹರಿಪ್ರಸಾದ್ ತಿರುಗೇಟು
''ಹೆದರಿಕೆ, ಬೆದರಿಕೆಗಳಿಗೆ ಕರ್ನಾಟಕದ ಜನ ಕ್ಯಾರೆ ಮಾಡುವುದಿಲ್ಲ''

ಬೆಂಗಳೂರು: 'ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ' ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, 'ನಡ್ಡಾ ಅವರ ಹೆದರಿಕೆ, ಬೆದರಿಕೆಗಳಿಗೆ ಕರ್ನಾಟಕದ ಜನ ಕ್ಯಾರೆ ಮಾಡುವುದಿಲ್ಲ' ಎಂದು ತಿರುಗೇಟು ನಿಡಿದ್ದಾರೆ.
''ತಮ್ಮ ಹಕ್ಕಿಗಾಗಿ ಸ್ವಾಭಿಮಾನಿ ಕನ್ನಡಿಗರು ಗುಲಾಮರಾಗಿ ಕೈಕಟ್ಟಿದ ಇತಿಹಾಸವೇ ಇಲ್ಲ. ರಾಷ್ಟ್ರೀಯ ಅಧ್ಯಕ್ಷರಾಗಿ ಕನಿಷ್ಟ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯ ಅರಿವಿರಲಿ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಷ್ಟೇ ಅಲ್ಲ, ಹಕ್ಕಿಂದ ಅನುದಾನ ಪಡೆಯುತ್ತೇವೆ'' ಎಂದು ಎಚ್ಚರಿಸಿದ್ದಾರೆ.
''ಪ್ರತಿಯೊಬ್ಬ ಸ್ವಾಭಿಮಾನಿ ಶ್ರಮಿಕರು ಬೆವರು ಸುರಿಸಿ ಕಟ್ಟಿದ ತೆರಿಗೆ ಹಣ ಪೋಲಾಗಲು ನಾವು ಬಿಡುವುದಿಲ್ಲ. ಪದೇ ಪದೇ ಮತದಾರರ ಮೇಲೆ ಬೆದರಿಕೆಯ ಮೂಲಕ ಒತ್ತಡ ಹಾಕುತ್ತಿರುವ ನಡ್ಡಾ ಅವರ ಮೇಲೆ ಕೂಡಲೇ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು'' ಎಂದು ಬಿ.ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಹೆದರಿಕೆ,ಬೆದರಿಕೆಗಳಿಗೆ ಕರ್ನಾಟಕದ ಜನ ಕ್ಯಾರೆ ಮಾಡುವುದಿಲ್ಲ ನಡ್ಡಾ ಅವರೇ.ತಮ್ಮ ಹಕ್ಕಿಗಾಗಿ ಸ್ವಾಭಿಮಾನಿ ಕನ್ನಡಿಗರು ಗುಲಾಮರಾಗಿ ಕೈಕಟ್ಟಿದ ಇತಿಹಾಸವೇ ಇಲ್ಲ.
— Hariprasad.B.K. (@HariprasadBK2) May 8, 2023
ರಾಷ್ಟ್ರೀಯ ಅಧ್ಯಕ್ಷರಾಗಿ ಕನಿಷ್ಟ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯ ಅರಿವಿರಲಿ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಷ್ಟೇ ಅಲ್ಲ,ಹಕ್ಕಿಂದ ಅನುದಾನ ಪಡೆಯುತ್ತೇವೆ.
1/2 pic.twitter.com/vXgNgEHNGT







