ಬಿಜೆಪಿ ಅಭ್ಯರ್ಥಿಯ ಪರವಾಗಿ ಮತದಾರರಿಗೆ ಬೆಳ್ಳಿ ಗಣೇಶ ವಿಗ್ರಹ ಹಂಚಿಕೆ ಆರೋಪ: ಪ್ರಕರಣ ದಾಖಲು

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಲು ಮನೆಗಳಿಗೆ ಬೆಳ್ಳಿ ಗಣೇಶ ವಿಗ್ರಹ ಹಂಚಿಕೆ ಮಾಡುತ್ತಿದ್ದವರ ವಿರುದ್ದ ಗಾಂಧಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ಎಸ್ ಜೆ ಎಂ ನಗರದ 16 ನೆ ಕ್ರಾಸ್ ನಲ್ಲಿ ಮತದಾರರಿಗೆ ಅಮಿಶ ಒಡ್ಡಿ ಬೆಳ್ಳಿಯ ಗಣೇಶ ವಿಗ್ರಹಗಳನ್ನು ಹಂಚುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಫ್ಲೇಯಿಂಗ್ ಸ್ಕ್ವಾಡ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಒಬ್ಬ ಹುಡುಗನ ಬಳಿ 2 ಚಿಕ್ಕ ಬೆಳ್ಳಿಯ ಗಣೇಶ ಮೂರ್ತಿಗಳು ಇದ್ದು ಹೆಚ್ಚಿನ ವಿಚಾರಣೆ ಮಾಡಲಾಗಿ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಮತದಾರರಿಗೆ ಆಮಿಷ ಒಡ್ಡಲು ಹಂಚಲು ತೆಗೆದುಕೊಂಡು ಹೋಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಣೇಶ ಮೂರ್ತಿ ಗಳನ್ನು ವಶಕ್ಕೆ ಪಡೆದು, ಈ ಸಂಬಂಧ ಘನ ನ್ಯಾಯಾಲಯ ಅನುಮತಿ ಪಡೆದು ಗಾಂಧಿ ನಗರ ಠಾಣೆಯಲ್ಲಿ ಗುನ್ನೆ ನಂ 41/2023 ಕಲಂ 171(ಇ) ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





