SSLC ಫಲಿತಾಂಶ: ಪೂರಕ ಪರೀಕ್ಷೆ ನೋಂದಣಿಗೆ ಇಂದಿನಿಂದಲೇ ಅವಕಾಶ

ಬೆಂಗಳೂರು: 2022-23ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಇಂದಿನಿಂದ ಮೇ 15ರವರೆಗೆ ಅವಕಾಶ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು, ಪೂರಕ ಪರೀಕ್ಷೆ ಯಾವಾಗ ನಡೆಯಲಿದೆ ಎನ್ನುವುದನ್ನು ಶಿಕ್ಷಣ ಇಲಾಖೆ ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಇನ್ನು ಉತ್ತರ ಪತ್ರಿಕೆ ಫೋಟೋಕಾಪಿ ಪಡೆಯಲು ಮೇ 08 ರಿಂದ ಮೇ 14ರವರೆಗೆ ಅವಕಾಶವಿದೆ. ಮರು ಮೌಲ್ಯ ಮಾಪನ ಮಾಡಲು ಮೇ 15 ರಿಂದ ಮೇ 21 ರವರೆಗೆ ಅವಕಾಶವಿದೆ ಎಂದು ತಿಳಿಸಿದರು.
Next Story