Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಚಿನ್ನ ಚಿನ್ನ ಆಸೈ

ಚಿನ್ನ ಚಿನ್ನ ಆಸೈ

ಕೆ.ಪಿ. ಸುರೇಶ್ಕೆ.ಪಿ. ಸುರೇಶ್8 May 2023 4:17 PM IST
share
ಚಿನ್ನ ಚಿನ್ನ ಆಸೈ

ಯಾವ ಸರಕಾರವೂ ಅನುಷ್ಠಾನ ಮಾಡಬಹುದಾದ, ಮಾಡಬೇಕಾದ ಕಾರ್ಯಕ್ರಮಗಳು

► 1. ಅಡವು ಸಾಲದ ಸಾರ್ವತ್ರೀಕರಣ

ಚಿನ್ನದ ಅಡವಿನ ಬಳಿಕದ ಹರಾಜಿನ ಒಂದೊಂದು ವಿಳಾಸದ ಹಿಂದೆಯೂ ಒಂದೊಂದು ಕಣ್ಣೀರ ಕಸಿವಿಸಿಯ ಕತೆ ಇದೆ. ನಗರ ಪ್ರದೇಶಗಳಲ್ಲಿ ಇದಕ್ಕೆ ಪರಿಹಾರ ಹೇಗೆ ಎಂದು ನನಗೆ ಗೊತ್ತಿಲ್ಲ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ಇದನ್ನು ಸಮು ದಾಯ ಸಮಾಲೋಚನೆ ಮೂಲಕ ಪರಿಹರಿಸಬಹುದು. ಮಹಿಳಾ ಸ್ವಸಹಾಯ ಸಂಘಗಳು ಈಗ ಸಾಕಷ್ಟು ಸಶಕ್ತವಾಗಿದ್ದು ಅವುಗಳು ತಮ್ಮ ತಮ್ಮ ಸದಸ್ಯರ ಈ ಆರ್ಥಿಕ ಸಂಕಷ್ಟದ ಬಗ್ಗೆ ಸಮಾಲೋಚನೆ ನಡೆಸಿ ಚಿನ್ನ ಅಡವಿನ ಸಾಲ ಕೊಡುವ ವ್ಯವಸ್ಥೆ ಮಾಡಬೇಕು. ಏನಿಲ್ಲವೆಂದರೂ ಇದು ಖಾಸಗಿಯಷ್ಟು ಕ್ರೂರವಾಗಿರದು. 

ಸರಕಾರ ಈ ರೀತಿಯ ಅಡವು ಸಾಲಗಳ ಬಡ್ಡಿ ವಹಿಸಿಕೊಂಡರೆ ಸಾಕು. ಹಾಗೆಯೇ, ಸಹಕಾರಿ ಸಂಘಗಳಲ್ಲಿ ಈ ಅಡವು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡುವ ವ್ಯವಸ್ಥೆ ಮಾಡಬಹುದು. ಶೂನ್ಯ ಬಡ್ಡಿ ಸಾಲದ ಮಿತಿಯನ್ನು ಐದು ಲಕ್ಷಕ್ಕೆ ಏರಿಸಿದರೂ ಇಷ್ಟು ಸಾಲ ಪಡೆಯುವ ರೈತರ ಸಂಖ್ಯೆ ಎಷ್ಟಿರಬಹುದು. ಯಾವ ಸಣ್ಣ , ಅತಿ ಸಣ್ಣ ರೈತನ ಸಾಲವೂ ಐವತ್ತು ಸಾವಿರ ಮೀರುವುದಿಲ್ಲ. 3-5 ಲಕ್ಷ ಸಾಲ ಪಡೆಯುವ ರೈತ ಸಣ್ಣ ರೈತನಾಗಲು ಸಾಧ್ಯವಿಲ್ಲ. ಆದ್ದರಿಂದ ಸರಕಾರ ಈ ಅಡವು ಸಾಲ ಸಣ್ಣ/ಅತಿ ಸಣ್ಣ ರೈತ/ ಕೃಷಿ ಕೂಲಿಕಾರರ ಸಂಕಷ್ಟದ ಹೆಜ್ಜೆಯೆಂದು ಪರಿಗಣಿಸಿ ಈ ಬಡ್ಡಿ ರಹಿತ ಸಾಲದ ವ್ಯವಸ್ಥೆ ಮಾಡಬೇಕಿದೆ

► 2. ಹೆದ್ದಾರಿ ರೈತ ಸಂತೆ:

ನಮ್ಮ ಹೆದ್ದಾರಿಗಳಲ್ಲಿ ಈಗಾಗಲೇ ರೈತರು ತರಕಾರಿ, ಹಣ್ಣು ಇತ್ಯಾದಿ ಮಾರಾಟ ಮಾಡುವುದನ್ನು ನೋಡುತ್ತಿದ್ದೇವೆ. ಈ ಪ್ರತಿಷ್ಠಿತ ಹೆದ್ದಾರಿಗಳಲ್ಲಿ ದೊಡ್ಡವರ ಹೊಟೇಲುಗಳಿಗಷ್ಟೇ ಅವಕಾಶ ಮಾಡಿಕೊಡುವ ಬದಲು ಪ್ರತೀ 20-30 ಕಿ.ಮೀ. ಗಳಿಗೆ ಅಂದರೆ ಬಹುತೇಕ ಒಂದೊಂದು ತಾಲೂಕು ಕೇಂದ್ರದ ಅಂದಾಜಿನಲ್ಲಿ ಈ ಹೆದ್ದಾರಿಗಳಲ್ಲಿ ಒಂದೆಕರೆಯಷ್ಟು ಜಮೀನಿನಲ್ಲಿ ರೈತ ಮಾರಾಟ ಕೇಂದ್ರಗಳನ್ನು ಪ್ರೋತ್ಸಾಹಿಸಬೇಕು.ಈ ಮಾರುಕಟ್ಟೆಯ ನಿರ್ವಹಣಾ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ ಮಟ್ಟದ ಯಾವುದಾದರೂ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ನೀಡಬಹುದು.

ಇಲ್ಲಿ ಕನಿಷ್ಠ 5,000 ಚದರಡಿಯ ಶೀಟ್ ಹಾಕಿದ ವ್ಯವಸ್ಥೆ, ಶೌಚಾಲಯ, ಸಂಗ್ರಹಕ್ಕೆ ಒಂದೆರಡು ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೂ ಸಾಕು. ಇಂತಹ ಸಂರಚನೆಗೆ 30 ಲಕ್ಷ ರೂ.ವೆಚ್ಚ ಸಾಕು. ರಾಜ್ಯಾದ್ಯಂತ ಕನಿಷ್ಠ 200 ಇಂತಹ ಮಾದರಿ ಮಾರು ಕಟ್ಟೆಗಳನ್ನು ಸ್ಥಾಪಿಸಬ ಹುದು. ಅಂದಾಜು 60 ಕೋಟಿ ರೂ.ಗಳಲ್ಲಿ ಇದನ್ನು ಸ್ಥಾಪಿಸಬಹುದು. ಸ್ಥಳೀಯ ತರಕಾರಿ, ವಿಶೇಷ ಉತ್ಪನ್ನಗಳು ಇಲ್ಲಿ ಮಾರಾಟಕ್ಕಿಡಬೇಕೇ ವಿನಃ ಕಂಪೆನಿಗಳ ಜಂಕ್ ಫುಡ್ಗೆ ಅವಕಾಶ ಇರಕೂಡದು.

► 3. ಸರಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ಔಷಧ ಅಂಗಡಿಗಳು

ಸರಕಾರಿ ವೈದ್ಯರು ಶಿಫಾರಸು ಮಾಡುವ ಎಲ್ಲಾ ಔಷಧಗಳೂ ಇಲ್ಲಿ ದೊರಕುವಂತಿರಬೇಕು. ಇದನ್ನು ಮಾಡಲು ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಸಾಕು. ಜನೌಷಧಿ ಕೇಂದ್ರಗಳ ಜನರಿಕ್ ಔಷಧಗಳ ಗುಣ ಮಟ್ಟದ ಬಗ್ಗೆ ಒಂದಷ್ಟು ಸಂಶಯಗಳಿವೆ.

 ಈ ದೃಷ್ಟಿಯಿಂದ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಈ ಔಷಧ ಅಂಗಡಿಗಳನ್ನು ಸ್ಥಾಪಿಸಬೇಕಷ್ಟೇ ಅಲ್ಲ, ಆಸ್ಪತ್ರೆಯ ಇನ್ನೂರು ಮೀಟರ್ ದೂರದಲ್ಲಿ ಯಾವುದೇ ಖಾಸಗಿ ಔಷಧ ಅಂಗಡಿಗೆ ಅನುಮತಿ ನೀಡಬಾರದು

► 4.ಪಂಚಾಯತ್ ಮಟ್ಟದ ಸಹಕಾರಿ ಸಂಘಗಳಲ್ಲಿ ರೈತರ ಉತ್ಪನ್ನ ಕೊಳ್ಳುವ ವ್ಯವಸ್ಥೆ

ಸಂಚಾರಿ ಟ್ರಕ್ಕುಗಳನ್ನು ಬಳಸಿ ಕೃಷಿ ಮಾರುಕಟ್ಟೆ ಸಹಕಾರಿ ಸಂಘಗಳ ಮೂಲಕ ವಾರಕ್ಕೆ ಎರಡು ಬಾರಿ ಈ ಕೊಳ್ಳುವ ವ್ಯವಸ್ಥೆ ಮಾಡಿದರೆರೈತರು ತಾಲೂಕು ಕೇಂದ್ರಕ್ಕೆ ಸಾಗಿಸುವ ವೆಚ್ಚ, ಕಷ್ಟ ತಪ್ಪುತ್ತದೆ. 

ಜೊತೆಗೆ ವಸ್ತುಗಳ ಕನಿಷ್ಠ ಕೊಳ್ಳುವ ಬೆಲೆಯನ್ನೂ ನಿಗದಿಪಡಿಸಬಹುದು. ಕ್ಯಾಂಪ್ಕೋ ಈಗಾಗಲೇ ಅಡಿಕೆ ಕೊಳ್ಳುವಿಕೆಯನ್ನು ಈ ಸಹಕಾರಿ ಸಂಘಗಳ ಆವರಣದಲ್ಲಿ ಮಾಡುತ್ತಿದೆ. ಇದೇ ಮಾದರಿಯನ್ನು ಎಲ್ಲೆಡೆ ವಿಸ್ತರಿಸಬಹುದು.

► 5.ಕೆಎಂಎಫ್ ಮೂಲಕ ರೈತ ಉತ್ಪಾದಕ ಸಂಘಗಳ/ಜಿಲ್ಲಾ ಸಾವಯವ ಒಕ್ಕೂಟಗಳ ಉತ್ಪನ್ನಗಳ ಮಾರಾಟ

ಈಗಾಗಲೇ ಕೆಲವು ನಂದಿನಿ ಬೂತ್ಗಳಲ್ಲಿ ಈ ರೀತಿಯ ಉತ್ಪನ್ನಗಳು ಮಾರಾಟವಾಗುತ್ತಿವೆ.ಇದನ್ನು ಇನ್ನಷ್ಟು ಸಂರಚನಾತ್ಮಕ ವಾಗಿ ರೂಪುಗೊಳಿಸಿದರೆ ಮಾರಾಟದಲ್ಲಿ ವೃತ್ತಿಪರತೆ ಮತ್ತು ಬಹು ದೊಡ್ಡ ಜಾಲ ಹೊಂದಿರುವ ಕೆಎಂಎಫ್ ಗ್ರಾಮೀಣ ಉತ್ಪನ್ನಗಳ ಮಾರಾಟಕ್ಕೆ ಸಹಕಾರಿಯಾಗುತ್ತದೆ.

► 6.ಪಂಚಾಯತ್ ಮಟ್ಟದಲ್ಲಿ ಕನಿಷ್ಠ ಐದು ಎಕರೆಗಳ ಕೈಗಾರಿಕಾ / ಉದ್ಯೋಗ ತಾಣ ಸೃಷ್ಟಿ

ಈ ಐದು ಎಕರೆ ಪ್ರದೇಶದಲ್ಲಿ ಶೆಡ್ ಸಹಿತ ಎಲ್ಲಾ ಮೂಲ ಸೌಕರ್ಯ ಸ್ಥಾಪಿಸಿ ಆಯಾ ಪಂಚಾಯತ್ ವ್ಯಾಪ್ತಿಯ ಉದ್ಯಮ ಶೀಲ ಯುವಕರಿಗೆ ಸ್ವಂತ ಉದ್ಯಮ ಆರಂಭಿಸಲು ವ್ಯವಸ್ಥೆ ಮಾಡಬೇಕು. ಈ ಯುವಕರಿಗೆ ಉದ್ಯಮಶೀಲತಾ ಸಾಲವನ್ನು ಸ್ಥಳೀಯ ಸಹಕಾರಿ ಬ್ಯಾಂಕುಗಳಿಂದ ನೀಡುವ ವ್ಯವಸ್ಥೆ ಆಗಬೇಕು. 

ಇದಕ್ಕಾಗಿಯೇ ಸರಕಾರ ಒಂದು ನಿಗಮವನ್ನು ಸ್ಥಾಪಿಸಿ ಬಂಡವಾಳ ಸಂಗ್ರಹ ಮತ್ತು ಸಾಲ ನೀಡಿಕೆ ಸಹಿತ ವೃತ್ತಿ ಪರ ಇನಕ್ಯುಬೇಷನ್, ಮಾಹಿತಿ,ಮಾರ್ಗದರ್ಶನಗಳನ್ನು ನೀಡುವ ಹೊಣೆಗಾರಿಕೆ ನೀಡಬಹುದು. ಆಯಾ ಜಿಲ್ಲೆಯ ವಿವಿಧ ತರಬೇತಿ ಸಂಸ್ಥೆಗಳನ್ನೂ ಭಾಗಿಯಾಗು ವಂತೆ ಮಾಡಬಹುದು.

► 7.ಪಂಚಾಯತ್ ಮಟ್ಟದಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಹಾಲು ಸಹಕಾರಿ ಸಂಘಗಳ ಜಂಟಿ ಜವಾಬ್ದಾರಿ ಮೂಲಕ ಪಶು ಆಹಾರ ತಯಾರಿಕಾ ಘಟಕ

ಪಶು ಆಹಾರದಲ್ಲಿರಬೇಕಾದ ಬೇರೆ ಬೇರೆ ವಸ್ತುಗಳ ಪ್ರಮಾಣವನ್ನು ಭೌತಿಕವಾಗಿ ಮಿಶ್ರ ಮಾಡುವುದು ರಾಕೆಟ್ ವಿಜ್ಞಾನ ವೇನಲ್ಲ. ಯಾವುದೇ ಪಶು ವೈದ್ಯರಲ್ಲಿ ಈ ಮಾಹಿತಿ ಇರುತ್ತದೆ. (ನಾವೇ ಇದನ್ನು ಸ್ಥಳೀಯವಾಗಿ ನಮಗೆ ಬೇಕಾದಷ್ಟು ಮಾಡಿಕೊಳ್ಳುತ್ತಿ ದ್ದೆವು.) ಬ್ರಾಂಡೆಡ್ ಪಶು ಆಹಾರವೆಂಬುದು ಒಂದು ದೊಡ್ಡ ಮಿಥ್ಯೆ. 

ತೀರಾ ಅವಶ್ಯವಿದ್ದಾಗ ಬೈಪಾಸ್ ಫೀಡನ್ನು ಮಾರುಕಟ್ಟೆ ಯಿಂದ ಕೊಂಡುಕೊಳ್ಳಬಹುದು. ಪಂಚಾಯತ್ ಮಟ್ಟದಲ್ಲಿ 2,000 ಚದರಡಿಯ ಸ್ಥಳವನ್ನು ಒದಗಿಸಿಕೊಟ್ಟರೆ ಕನಿಷ್ಠ ತಿಂಗಳಿಗೆ ನೂರು ಟನ್ನಷ್ಟು ಪಶು ಆಹಾರ ಅನಾಯಾಸವಾಗಿ ತಯಾರಿಸಬಹುದು ಮತ್ತು ಸ್ಥಳೀಯವಾಗಿ ಮಾರಾಟ ಮಾಡಬಹುದು. ಈ ಪಶು ಆಹಾರಕ್ಕೆ ಹಾಕುವ ಜಿಎಸ್ಟಿ ಸರಕಾರ ಮನ್ನಾ ಮಾಡಬೇಕು.

► 8.ತಾಲೂಕು ಮಟ್ಟದಲ್ಲಿ ತಾಲೂಕು ಶಾಲಾಭಿವೃದ್ಧಿ ಸಮಿತಿ

ಒಂದು ತಾಲೂಕಿನ ಸರಕಾರಿ ಶಾಲೆಗಳ ಅವಶ್ಯಕತೆಗಳನ್ನು ಆದ್ಯತೆಯ ಮೇಲೆ ಪಟ್ಟಿ ಮಾಡಿ ಅವುಗಳಿಗೆ ಅನುದಾನ, ಸಾರ್ವಜನಿಕ ದೇಣಿಗೆ ಇತ್ಯಾದಿಗಳನ್ನು ಸಂಯೋಜಿಸುವ ನಾಗರಿಕ ಸಮಿತಿಯ ಅವಶ್ಯಕತೆ ಇದೆ.

ಈಗಿರುವಂತೆ ತಾಲೂಕು ಮಟ್ಟದ ಶಿಕ್ಷಣ ಅಧಿಕಾರಿಯೇ ಈ ಶಾಲೆಗಳ ಸರ್ವಾಧಿಕಾರಿ! ಒಟ್ಟಾರೆ ತಾಲೂಕಿನ ಸಮಗ್ರ ಅಭಿವೃದ್ಧಿ ಗೊಂದು oveಡಿvieತಿ ನೀಡಲು ಇದು ಮುಖ್ಯ. ಈ ಸಮಿತಿಗೆ ತಾಲೂಕಿನ ತಹಶೀಲ್ದಾರ್/ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಇದಕ್ಕೊಂದಷ್ಟು ಅಧಿಕಾರ ಮತ್ತು ತೂಕ ಇರುತ್ತದೆ.

share
ಕೆ.ಪಿ. ಸುರೇಶ್
ಕೆ.ಪಿ. ಸುರೇಶ್
Next Story
X