ಎಸೆಸೆಲ್ಸಿ ಪರೀಕ್ಷೆ: ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‍ಗೆ ಶೇ.100 ಫಲಿತಾಂಶ

ಉಪ್ಪಿನಂಗಡಿ: 2022-2023 ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆ ಬರೆದ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‍ನ ಎಲ್ಲಾ 41 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶಾಲೆಗೆ ಶೇ.100 ಫಲಿತಾಂಶ ಲಭಿಸಿರುತ್ತದೆ.
ಇವರಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದವರು: ಫಾತಿಮತ್ ಅಕ್ಸ (582) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು, ಫಾತಿಮ ಜುಬೈರಾ (575) ದ್ವಿತೀಯ ಹಾಗೂ ಫಾತಿಮತ್ ಅಫೀಫ (561) ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಹಲೀಮ ಮುಫ್ತುನ್ (552), ನಿಶ್ಮಾ ಪಾತೀಮ ಹಕೀಮ್ (551), ಮೊಹಮ್ಮದ್ ತನೂಫï (541), ಫಾತಿಮತ್ ಅಫೀಝ (539), ಆಯಿಷತ್ ಸಫಾನ (535), ಫಾತಿಮ ಸಹಲಾ (530), ಫಾತಿಮತ್ ಕಾಶಿಫ (530) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
Next Story