'ದಿ ಕೇರಳ ಸ್ಟೋರಿ' ಚಿತ್ರವನ್ನು ನಿಷೇಧಿಸಿದ ಪಶ್ಚಿಮ ಬಂಗಾಳ ಸರ್ಕಾರ
ಕೋಲ್ಕತಾ: ವಿವಾದಾತ್ಮಕ ಚಿತ್ರವಾದ 'ದಿ ಕೇರಳ ಸ್ಟೋರಿ'ಯನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿದೆ. ನಿರ್ದಿಷ್ಟ ಸಮುದಾಯದ ಮೇಲೆ ಹಗೆ ಸಾಧಿಸುವಂತೆ ಚಿತ್ರವನ್ನು ನಿರ್ಮಿಸಲಾಗಿದೆ ಎಂಬ ಆರೋಪ ಚಿತ್ರದ ಮೇಲಿದ್ದು, ಈಗಾಗಲೇ ಬಲಪಂಥೀಯರು ಈ ಚಿತ್ರಕ್ಕೆ ವ್ಯಾಪಕ ಪ್ರಚಾರ ನೀಡುತ್ತಿದ್ದಾರೆ.
ಮಧ್ಯ ಪ್ರದೇಶ ಸರಕಾರ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದು, ಪ್ರಧಾನಿ ಮೋದಿ, ಜೆಪಿ ನಡ್ಡಾ ಸೇರಿದಂತೆ ಹಲವು ಬಿಜೆಪಿ ವರಿಷ್ಠರು ಚಿತ್ರದ ಪರವಾಗಿ ಹೇಳಿಕೆಗಳನ್ನು ನೀಡಿದ್ದಾರೆ.
ಕೇರಳದಲ್ಲಿ 'ಲವ್ ಜಿಹಾದ್' ಮೂಲಕ 32 ಸಾವಿರ ಮಹಿಳೆಯರನ್ನು ಮತಾಂತರಿಸಲಾಗಿದೆ ಎಂದು ಪ್ರತಿಪಾದಿಸಿದ್ದ ಚಿತ್ರತಂಡವು, ಇದು ನೈಜ ಕತೆ ಎಂದು ಹೇಳಿ ಪ್ರಚಾರ ಮಾಡಿತ್ತು. ಆದರೆ, ಈ ಬಗ್ಗೆ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಪ್ರಶ್ನೆಗಳು ಎದ್ದಿದ್ದವು.
ಈ ಚಿತ್ರವನ್ನು ತಮಿಳುನಾಡಿನಲ್ಲಿ ಪ್ರದರ್ಶಿಸದಂತೆ ಭಾರೀ ಪ್ರತಿಭಟನೆ ನಡೆದ ಬಳಿಕ ಚಿತ್ರ ಮಂದಿರ ಮಾಲಕರು ಚಿತ್ರದ ಪ್ರದರ್ಶನ ರದ್ದುಗೊಳಿಸಿದ್ದರು.
Next Story