ಪುತ್ತೂರು: ಹಿಮಾನಿಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ

ಪುತ್ತೂರು: ನಗರದ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಹಿಮಾನಿ ಸಿ.ಎಚ್. ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕ ಪಡೆದು ರಾಜ್ಯಮಟ್ಟದ ಸಾಧನೆ ಮಾಡಿದ್ದಾರೆ.
ಮೂಲತಃ ಕಾಣಿಯೂರಿನವರಾಗಿದ್ದು ಪ್ರಸ್ತುತ ಪುತ್ತೂರಿನ ಬಪ್ಪಳಿಗೆಯಲ್ಲಿ ವಾಸವಾಗಿರುವ ಚಿದಾನಂದ ಪೂಜಾರಿ- ಶೋಭಾ ಎಂ. ದಂಪತಿಯ ಪುತ್ರಿ ಹಿಮಾನಿ, ಪ್ರತೀ ತರಗತಿಯಲ್ಲೂ ಟಾಪರ್ ಆಗಿಯೇ ಮುನ್ನಡೆಯುತ್ತಾ ಬಂದಿದ್ದಾಳೆ.
ತಂದೆ ಚಿದಾನಂದ ಪೂಜಾರಿ ಅವರು ಅಂಚೆ ಇಲಾಖೆಯಲ್ಲಿದ್ದು, ಆರ್ಯಾಪುವಿನಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶೋಭಾ ಕೂಡ ಅಂಚೆ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದು, ಸೂರಿಕುಮೇರ್‍ನಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚೆಸ್, ಡ್ರಾಯಿಂಗ್, ಸಂಗೀತ, ಭರತನಾಟ್ಯದಲ್ಲಿ ಸಾಧನೆ ಮಾಡುತ್ತಿರುವ ಹಿಮಾನಿ ಅವರು ಪಿಯುಸಿಯಲ್ಲಿ ಪಿಸಿಎಂಬಿ ಮಾಡಿ ಮೆಡಿಕಲ್ ಫೀಲ್ಡ್‍ಗೆ ಹೋಗುವ ಕನಸು ಹೊಂದಿದ್ದಾಳೆ.
Next Story