ಕರ್ನಾಟಕದ ಜನತೆಗೆ ಬೆದರಿಕೆ ಒಡ್ಡಿರುವ ಬಿಜೆಪಿ ಅಧ್ಯಕ್ಷ ರಾಜೀನಾಮೆ ನೀಡಲಿ: ಡಾ.ಮಂಜುನಾಥ್ ಭಂಡಾರಿ

ಮಂಗಳೂರು: ಕರ್ನಾಟಕದ ಜನತೆಗೆ ಬೆದರಿಕೆ ಒಡ್ಡಿರುವ ಮತ್ತು ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಹೇಳಿಕೆ ನೀಡಿರುವ ಬಿಜೆಪಿಯ ಅಧ್ಯಕ್ಷ ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಸುದ್ದಿ ಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ರಾಜ್ಯದಿಂದ ಪ್ರತಿ ವರ್ಷ 6.7 ಲಕ್ಷ ಕೋಟಿ ರೂಪಾಯಿ ತೆರಿಗೆ ಹಣ ಕೇಂದ್ರಕ್ಕೆ ಸಂದಾಯ ವಾಗುತ್ತದೆ ಇದರಲ್ಲಿ ಶೇ 15 ರಷ್ಟು ಮಾತ್ರ ಬೇರೆ ಬೇರೆ ಯೋಜನೆ ಗಳ ಮೂಲಕ ರಾಜ್ಯಕ್ಕೆ ಬರುತ್ತದೆ. ಈಶಾನ್ಯ ರಾಜ್ಯ ಗಳಲ್ಲಿ ಅಲ್ಲಿಂದ ಬರುವ ತೆರಿಗೆಗಿಂತ ಹೆಚ್ಚು ಹಣ ಕೇಂದ್ರ ಸರ್ಕಾರದಿಂದ ಮರು ಪಾವತಿಯಾಗುತ್ತದೆ. ಕರ್ನಾಟಕ ಜನರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ವಿರೋಧಿಸಿ ಕೇಂದ್ರಕ್ಕೆ ನಾವು ತೆರಿಗೆ ಪಾವತಿಸುವುದಿಲ್ಲ ಎನ್ನಲು ಸಾಧ್ಯವೇ ? ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆ ಯಲ್ಲಿ ರಾಜ್ಯ ಗಳಿಗೆ ಕೇಂದ್ರ ಸರ್ಕಾರ ಯಾವ ಗೌರವ ನೀಡಬೇಕು. ಸಂವಿಧಾನದಲ್ಲಿ ಯಾವ ಹಕ್ಕುಗಳನ್ನು ನೀಡಿದೆ ಎನ್ನುವ ವಿವೇಚನೆ ಮಾಡದೆ ನಡ್ಡಾ ನೀಡಿರುವ ಹೇಳಿಕೆ ಕರ್ನಾಟಕದ ಜನರ ಸ್ವಾಭಿಮಾನ ವನ್ನು ಕೆಣಕಿದಂತಾಗಿದೆ.ರಾಜ್ಯ ಕ್ಕೆ ಮತನೀಡಲು ಬೆದರಿಕೆ ಒಡ್ಡಿದಂತಾಗಿದೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.
ಮೋದಿಯಿಂದ ಹತಾಶ ಪ್ರಯತ್ನ:-ಕರ್ನಾಟಕದಲ್ಲಿ ಬಿಜೆಪಿಗೆ ಆಗಿರು ಹಿನ್ನೆಲೆಯ ಕಾರಣ ದೇಶದ ಪ್ರಧಾನಿ ಮೋದಿ 21 ರ್ಯಾಲಿ, 6 ರೋಡ್ ಶೋ ಸೇರಿದಂತೆ ಒಟ್ಟು 27 ಕಾರ್ಯಕ್ರಮ ಸೋಲಿನ ಹತಾಶ ಭಾವನೆಯಿಂದ ಮಾಡುತ್ತಿದ್ದಾರೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.