ಎಸ್ಸೆಸ್ಸೆಫ್: ರೈಂಬೋ ಕಾರ್ಯದರ್ಶಿ ಶಿಬಿರ ಸಮಾರೋಪ

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ರೈಂಬೋ ವಿಭಾಗ ಕಾರ್ಯದರ್ಶಿಗಳಿಗಾಗಿ ಆಯೋಜಿಸಿದ flourish ಶಿಬಿರ ಮಂಜನಾಡಿ ಅಲ್ ಮದೀನಾ ಮಲಾಝ್ ಸಭಾಂಗಣದಲ್ಲಿ ನಡೆಯಿತು.
ಪುಟಾಣಿ ಮಕ್ಕಳಿಗೆ ಧಾರ್ಮಿಕ ನಿಷ್ಠೆಯನ್ನು ಬೋಧಿಸಲು, ಅವರಿಗೆ ಉಜ್ವಲ ಭವಿಷ್ಯದ ಕನಸನ್ನು ಬಿತ್ತುವ ಸಲುವಾಗಿ ಎಸ್ಸೆಸ್ಸೆಫ್ ಸಂಘಟನೆಯ ವಿಶೇಷ ಯೋಜನೆಯಾಗಿದೆ ರೈಂಬೋ ಟೀಂ. ಕಲುಷಿತಗೊಂಡ ಪರಿಸರ, ಅನಿಯಂತ್ರಿತ ಮೊಬೈಲ್ ಬಳಕೆಗಳ ಮೂಲಕ ಮಕ್ಕಳು ದಾರಿ ತಪ್ಪುತ್ತಿರುವಾಗ ಇಂಥಹಾ ಯೋಜನೆಗಳು ಸಕಾಲಿಕವಾಗಿದೆ ಎಂದು ಖಲೀಲ್ ಸಖಾಫಿ ಕುತ್ತಾರ್, ಅಬ್ದುನ್ನಾಸಿರ್ ಬಜ್ಪೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಗತಿ ಮಂಡಿಸಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಅಧ್ಯಕ್ಷತೆ ವಹಿಸಿದರು. ಎಸ್ಸೆಸ್ಸೆಫ್ ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಮುನೀರ್ ಸಖಾಫಿ ಉಳ್ಳಾಲ ಸಭೆಯನ್ನು ಉದ್ಘಾಟಿಸಿದರು.
ಅಲ್ ಮದೀನಾ ಸಾರಥಿ ಅಬ್ದುಲ್ ಖಾದರ್ ಸಖಾಫಿ, ಅಮ್ಜದಿ ಉಸ್ತಾದ್, ಎಸ್ಸೆಸ್ಸೆಫ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಉಬೈದುಲ್ಲಾ ಕುತ್ತಾರ್, ರೈಂಬೋ ಕಾರ್ಯದರ್ಶಿ ಶಿಹಾಬ್ ಬೆಂಗಳೂರು, ಕನ್ವೀನರ್ ಸುಹೈಲ್, ಸಿದ್ದೀಕ್ ಬಜ್ಪೆ ಉಪಸ್ಥಿತರಿದ್ದರು.