276 ದಿನಗಳ ಬಳಿಕ ಭೂಮಿಗೆ ಮರಳಿದ ಚೀನಾದ ಬಾಹ್ಯಾಕಾಶ ನೌಕೆ

ಬೀಜಿಂಗ್, ಮೇ 8: ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಪರೀಕ್ಷಿಸುವ ಹೆಗ್ಗುರುತು ಕಾರ್ಯಾಚರಣೆಗಾಗಿ ಕಕ್ಷೆಯಲ್ಲಿ 276 ದಿನ ಉಳಿದಿದ್ದ ಚೀನಾದ ಪ್ರಾಯೋಗಿಕ ಬಾಹ್ಯಾಕಾಶ ನೌಕೆಯು ಸೋಮವಾರ ಭೂಮಿಗೆ ಮರಳಿರುವುದಾಗಿ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
2022ರ ಆಗಸ್ಟ್ ನಲ್ಲಿ ಬಾಹ್ಯಾಕಾಶಕ್ಕೆ ನೆಗೆದಿದ್ದ ಮಾನವರಹಿತ ಬಾಹ್ಯಾಕಾಶ ನೌಕೆಯು ನಿಗದಿಯಂತೆ ವಾಯವ್ಯ ಚೀನಾದ ಜಿಯುಖ್ವಾನ್ ಉಡಾವಣಾ ಕೇಂದ್ರದಲ್ಲಿ ಸೋಮವಾರ ಬಂದಿಳಿದಿದೆ ಎಂದು ವರದಿ ತಿಳಿಸಿದೆ.
ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಆರೋಹಿಸಲು ಹೆಚ್ಚು ಅನುಕೂಲಕರ ಮತ್ತು ಅಗ್ಗದ ಮಾರ್ಗವನ್ನು ಒದಗಿಸುವ, ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಚೀನಾದ ಸಂಶೋಧನೆಯಲ್ಲಿ ಪ್ರಗತಿಯನ್ನು ಈ ಪರೀಕ್ಷೆ ಗುರುತಿಸಿದೆ ಎಂದು ವರದಿ ಹೇಳಿದೆ.
ಕಕ್ಷೆಯಲ್ಲಿ ವರ್ಷಾನುಗಟ್ಟಲೆ ಉಳಿಯುವ ಅಮೆರಿಕ ವಾಯುಪಡೆಯ ಎಕ್ಸ್-37ಬಿ ಬಾಹ್ಯಾಕಾಶ ನೌಕೆಯ ರೀತಿಯ ನೌಕೆಯನ್ನು ಚೀನಾವೂ ಅಭಿವೃದ್ಧಿಪಡಿಸುತ್ತಿರುವುದಾಗಿ ಊಹಿಸಲಾಗಿದೆ.
Next Story