ಟೆಕ್ಸಾಸ್ ಶೂಟೌಟ್ ಪ್ರಕರಣ ಮೃತರಲ್ಲಿ ಒಬ್ಬರು ಭಾರತೀಯ ಮಹಿಳೆ

ವಾಷಿಂಗ್ಟನ್, ಮೇ 8: ಅಮೆರಿಕದ ಟೆಕ್ಸಾಸ್ ನ ಶಾಪಿಂಗ್ ಮಾಲ್ ನಲ್ಲಿ ಶನಿವಾರ ನಡೆದಿದ್ದ ಗುಂಡಿನ ದಾಳಿಯಲ್ಲಿ ಮೃತಪಟ್ಟ 9 ಮಂದಿಯಲ್ಲಿ ಭಾರತೀಯ ಮಹಿಳೆಯೂ ಸೇರಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
ಹೈದರಾಬಾದ್ ನ 27 ವರ್ಷದ ಐಶ್ವರ್ಯ ಥಾಟಿಕೊಂಡ ಈ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರೆ ಅವರ ಭಾರತೀಯ ಸ್ನೇಹಿತ ಗಾಯಗೊಂಡಿದ್ದಾರೆ. ಟೆಕ್ಸಾಸ್ ನ `ಪರ್ಫೆಕ್ಟ್ ಜನರಲ್ ಕಾಂಟ್ರಾಕ್ಟರ್ಸ್ ಎಲ್ಎಲ್ಸಿ' ಎಂಬ ಸಂಸ್ಥೆಯಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ಆಗಿ ಐಶ್ವರ್ಯ ಕೆಲಸ ಮಾಡುತ್ತಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಶನಿವಾರ ಗುಂಡಿನ ದಾಳಿ ನಡೆಯುವುದಕ್ಕೆ ಕೆಲ ನಿಮಿಷಗಳ ಮುನ್ನ ಐಶ್ವರ್ಯ ಭಾರತದಲ್ಲಿರುವ ತನ್ನ ಹೆತ್ತವರೊಂದಿಗೆ ಫೋನ್ನಲ್ಲಿ ಮಾತಾಡಿದ್ದರು. ಗುಂಡಿನ ದಾಳಿಯ ಮಾಹಿತಿ ತಿಳಿದ ಹೆತ್ತವರು ಮತ್ತೆ ಮಗಳಿಗೆ ಫೋನ್ ಕರೆ ಮಾಡಿದಾಗ ಉತ್ತರಿಸಿಲ್ಲ ಎಂದು ವರದಿ ಹೇಳಿದೆ.
Next Story