ಕೆನಡಾ: ಲಿಬರಲ್ ಪಕ್ಷದ ಅಧ್ಯಕ್ಷರಾಗಿ ಸಚಿತ್ ಮೆಹ್ರಾ ಆಯ್ಕೆ

ಟೊರಂಟೊ, ಮೇ 8: ಕೆನಡಾದ ಆಡಳಿತಾರೂಢ ಲಿಬರಲ್ ಪಕ್ಷದ ನೂತನ ಅಧ್ಯಕ್ಷರಾಗಿ ಭಾರತೀಯ ಕೆನಡಿಯನ್ ಸಚಿತ್ ಮೆಹ್ರಾರನ್ನು ಆಯ್ಕೆ ಮಾಡಲಾಗಿದೆ.
ಪ್ರಧಾನಿ ಜಸ್ಟಿನ್ ಟ್ರೂಡೊ ಲಿಬರಲ್ ಪಕ್ಷದ ನಾಯಕನಾಗಿರುತ್ತಾರೆ. ನಿಧಿ ಸಂಗ್ರಹಣೆ, ದೇಶದಾದ್ಯಂತ ಪಕ್ಷದ ಸದಸ್ಯತ್ವವನ್ನು ಹೆಚ್ಚಿಸುವುದು ಇತ್ಯಾದಿ ಸಾಂಸ್ಥಿಕ ಚಟುವಟಿಕೆಗಳಿಗೆ ಅಧ್ಯಕ್ಷ ಸಚಿತ್ ಮೆಹ್ರಾ ಜವಾಬ್ದಾರರಾಗಿರುತ್ತಾರೆ. ಶನಿವಾರ ಒಟ್ಟಾವದಲ್ಲಿ ಮುಕ್ತಾಯಗೊಂಡ ಲಿಬರಲ್ ಪಕ್ಷದ ಮೂರು ದಿನಗಳ ಕಾರ್ಯಕಾರಿಣಿ ಸಭೆಯ ಸಮಾರೋಪದಲ್ಲಿ ಮೆಹ್ರಾರ ನೇಮಕವನ್ನು ಘೋಷಿಸಲಾಗಿದೆ. ಸಚಿತ್ ಮೆಹ್ರಾರ ತಂದೆ ದಿಲ್ಲಿ ನಿವಾಸಿಯಾಗಿದ್ದು 1960ರಲ್ಲಿ ಕೆನಡಾಕ್ಕೆ ಸ್ಥಳಾಂತರಗೊಂಡಿದ್ದರು.
Next Story