ಎಸೆಸೆಲ್ಸಿ ಪರೀಕ್ಷೆ: ತೆಂಕುಳಿಪಾಡಿ ಬಾಮಿ ಆಂಗ್ಲ ಮಾಧ್ಯಮ ಶಾಲೆಗೆ 100 ಶೇ. ಫಲಿತಾಂಶ

ಗುರುಪುರ, ಮೇ 9: ಪ್ರಸಕ್ತ (2022-23ನೇ) ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೆಂಕುಳಿಪಾಡಿಯ ಬಾಮಿ ಆಂಗ್ಲ ಮಾಧ್ಯಮ ಶಾಲೆ 100 ಶೇ. ಫಲಿತಾಂಶ ದಾಖಲಿಸಿದೆ. ಇಲ್ಲಿನ ವಿದ್ಯಾರ್ಥಿನಿ ಫಾತಿಮಾ ರಿಫಾ 577 ( 92.32%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬಡಕಬೈಲ್ ಅಬೂಬಕರ್ ಮತ್ತು ತೋಡಾರ್ ದಿ.ಅಬ್ದುಲ್ ಖಾದರ್ ಅವರ ಮೊಮ್ಮಗಳಾದ ಫಾತಿಮಾ ರಿಫಾ, ಬಡಕಬೈಲ್ ಅಬ್ದುಲ್ ಅಝೀಝ್ ಮತ್ತು ಸಫಿಯಾ ದಂಪತಿಯ ಪುತ್ರಿಯಾಗಿದ್ದಾರೆ.
ಈ ಶಾಲೆಯಿಂದ ಪರೀಕ್ಷೆಗೆ ಹಾಜರಾಗಿರುವ 30 ವಿದ್ಯಾರ್ಥಿಗಳಲ್ಲಿ ಏಳು ಮಂದಿ ವಿಶಿಷ್ಟ ಶ್ರೇಣಿ, 18 ಮಂದಿ ಪ್ರಥಮ ಶ್ರೇಣಿ ಹಾಗೂ ಐದು ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ 100% ಫಲಿತಾಂಶ ದಾಖಲಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಶಾಲೆಯ ಜಿಎಂಸಿ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದ ಅಭಿನಂದಿಸಿದೆ.
Next Story