ಐಪಿಎಲ್: ಜೋಫ್ರಾ ಆರ್ಚರ್ ಔಟ್; ಬದಲಿ ಆಟಗಾರನನ್ನು ಪ್ರಕಟಿಸಿದ ಮುಂಬೈ ಇಂಡಿಯನ್ಸ್

ಮುಂಬೈ: ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಮುಂಬೈ ಇಂಡಿಯನ್ಸ್ 2023 ರ ಋತುವಿನ ಉಳಿದ ಪಂದ್ಯಗಳಿಗಾಗಿ ಪ್ರಮುಖ ವೇಗಿ ಜೋಫ್ರಾ ಆರ್ಚರ್(Jofra Archer) ಬದಲಿಗೆ ಕ್ರಿಸ್ ಜೋರ್ಡನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದೆ.
ಮಂಗಳವಾರ ಈ ಕುರಿತು ಟ್ವೀಟ್ ,ಮಾಡಿರುವ ಮುಂಬೈ ಇಂಡಿಯನ್ಸ್, ಆರ್ಚರ್ ಸ್ವದೇಶಕ್ಕೆ ಮರಳುತ್ತಾರೆ . ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅವರ ಮೇಲ್ವಿಚಾರಣೆ ನಡೆಸುತ್ತದೆ ಎಂದು ಖಚಿತಪಡಿಸಿದೆ.
ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಒಟ್ಟು 2 ಕೋಟಿ ರೂ. ಪಾವತಿಸಿ ಆರ್ಚರ್ ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.
"ಕ್ರಿಸ್ ಜೋರ್ಡನ್ ಪ್ರಸಕ್ತ ಋತುವಿನ ಉಳಿದ ಪಂದ್ಯಗಳಗೆ ಮುಂಬೈ ತಂಡವನ್ನು ಸೇರಿಕೊಳ್ಳುತ್ತಾರೆ. ಕ್ರಿಸ್ ಜೋಫ್ರಾ ಆರ್ಚರ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಆರ್ಚರ್ ಅವರ ಚೇತರಿಕೆ ಮತ್ತು ಫಿಟ್ನೆಸ್ ಅನ್ನು ಇಸಿಬಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ" ಎಂದು ಮುಂಬೈ ಇಂಡಿಯನ್ಸ್ Twitter ಪೋಸ್ಟ್ ನಲ್ಲಿ ಬರೆದಿದೆ.
2016 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಜೋರ್ಡನ್, ಇದುವರೆಗೆ 28 ಐಪಿಎಲ್ ಪಂದ್ಯಗಳನ್ನು ಆಡಿದ್ದು ಒಟ್ಟು 27 ವಿಕೆಟ್‌ಗಳನ್ನು ಪಡೆದಿದ್ದಾರೆ. ವೇಗಿ ಇಂಗ್ಲೆಂಡ್ ತಂಡವನ್ನು 87 ಟಿ-20 ಗಳಲ್ಲಿ ಪ್ರತಿನಿಧಿಸಿದ್ದಾರೆ ಹಾಗೂ 96 ಟಿ-20 ವಿಕೆಟ್‌ಗಳನ್ನು ಕಬಳಿಸಿದ್ದಾರೆ







