ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು: 40 ದಿನಗಳಲ್ಲಿ 3ನೇ ಪ್ರಕರಣ
ಹೊಸದಿಲ್ಲಿ: ಆಫ್ರಿಕಾದಿಂದ ಭಾರತಕ್ಕೆ ತಂದಿದ್ದ ಮತ್ತೊಂದು ಚೀತಾ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಮಂಗಳವಾರ ವರದಿ ಮಾಡಿದೆ. 40 ದಿನಗಳಲ್ಲಿ ಮೂರು ಚೀತಾಗಳು ಇದೀಗ ಸಾವನ್ನಪ್ಪಿದೆ.
"ಕೆಎನ್ಪಿಯ ಮೇಲ್ವಿಚಾರಣಾ ತಂಡವು ಬೆಳಿಗ್ಗೆ ಗಾಯಗೊಂಡ ಸ್ಥಿತಿಯಲ್ಲಿ 'ದಕ್ಷಾ' ಪತ್ತೆಯಾದ ಬಳಿಕ ತಕ್ಷಣವೇ ಅಗತ್ಯ ಔಷಧೋಪಚಾರ ಮತ್ತು ಚಿಕಿತ್ಸೆ ನೀಡಲಾಯಿತು. ಆದರೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಚೀತಾ ಸಾವನ್ನಪ್ಪಿದೆ" ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
70 ವರ್ಷಗಳ ಹಿಂದೆ ದೇಶದಿಂದ ಕಣ್ಮರೆಯಾದ ಪ್ರಭೇದಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯ ಆರಂಭಿಕ ಹಂತದಲ್ಲಿ ಸೆಪ್ಟೆಂಬರ್ ಮತ್ತು ಫೆಬ್ರವರಿಯಲ್ಲಿ ಒಟ್ಟು 20 ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕೂ ಮುನ್ನ ಒಂದು ಹೆಣ್ಣು ಚಿರತೆ ಮತ್ತು ಒಂದು ಗಂಡು ಚಿರತೆ ಕ್ರಮವಾಗಿ ಮಾರ್ಚ್ 27 ಮತ್ತು ಏಪ್ರಿಲ್ 23 ರಂದು ಸಾವನ್ನಪ್ಪಿದ್ದವು.
Next Story