ಮೇ 10ರಂದು ಮತದಾನ: ಮತದಾನ ಜಾಗೃತಿಗೊಂದು ಕಲಾಕೃತಿ

ಉಡುಪಿ, ಮೇ 9: ರಾಜ್ಯ ವಿಧಾನಸಭಾ ಚುನಾವಣೆಗೆ ಬುಧವಾರ ನಡೆಯಲಿದೆ. ಜನರಲ್ಲಿ ಮತದಾನದ ಕುರಿ ತಂತೆ ಮಣಿಪಾಲದ ಇಬ್ಬರು ಕಲಾವಿದರು ಮತದಾನ ಜಾಗೃತಿ ಕಲಾಕೃತಿಯೊಂದನ್ನು ರಚಿಸುವ ಮೂಲಕ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ತೆರಳುವಂತೆ ಪ್ರೇರೇಪಿಸುತಿದ್ದಾರೆ.
ನಿಮ್ಮ ರಾಜ್ಯದ ಅಭಿವೃದ್ಧಿ ನಿಮ್ಮ ಬೆರಳ ತುದಿಯಲ್ಲಿ. ಪ್ರಜ್ಞಾವಂತ ಮತದಾರರೇ ತಪ್ಪದೇ ಮತದಾನ ಮಾಡಿ, ಕುರ್ಚಿಗಾಗಿ ಹೊಡೆದಾಡುವ ಪ್ರತಿನಿಧಿಗಳು ಬೇಡ; ಅಬಿವೃದ್ಧಿಗಾಗಿ ಜೀವನವನ್ನು ಮುಡಿಪಾಗಿಡುವ ಪ್ರತಿನಿಧಿ ಯನ್ನು ಆಯ್ಕೆ ಮಾಡಿ ಎಂದು ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ವೆಂಕಿ ಪಲಿಮಾರ್ ಮತದಾನದ ಬಗ್ಗೆ ಜಾಗೃತಿ ನಡೆಸುವ ಉದ್ದೇಶದಿಂದ ಕ್ಲೇ ಮತ್ತು ಕಬ್ಬಿಣದ ವಾಶರ್ ಗಳನ್ನು ಬಳಸಿ ಕಲಾಕೃತಿಯನ್ನು ರಚಿಸಿ ಅನಾವರಣ ಗೊಳಿಸಿದ್ದಾರೆ
ಸ್ವಾಭಿಮಾನದ ಮತದಾರರಾಗಿ ಯಾವುದೇ ಆಮಿಷಗಳಿಗೆ ಒಳಗಾಗದೇ ಸೂಕ್ತ ಪ್ರತಿನಿಧಿಯನ್ನು ಆಯ್ಕೆ ಮಾಡುವ ಮೂಲಕ ರಾಜ್ಯದ ಅಬಿವೃದ್ಧಿಯಲ್ಲಿ ನಿಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡುವಂತೆ ತಮ್ಮ ಕಲಾಕೃತಿಯ ಮೂಲಕ ಅವರು ಸಂದೇಶ ನೀಡಿದ್ದಾರೆ.