ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

ಕಾಪು, ಮೇ 9: ಉಳಿಯಾರಗೋಳಿಯ ವಸಂತ್ ಎಂಬವರು ವೀಪರೀತ ಮಧ್ಯ ಸೇವನೆಯ ಚಟ ಹಾಗೂ ಪತ್ನಿಯ ಮೇಲಿನ ಕೋಪದಿಂದ ಮೇ 8ರಂದು ಸಂಜೆ ವೇಳೆ ಮನೆಯ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ : ವಿಪರೀತ ಮದ್ಯಪಾನ ಮಾಡುವ ಚಟದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಕಟ್ಬೆಲ್ತೂರು ಗ್ರಾಮದ ಹರೆಗೋಡು ಕೊತ್ತಾಡಿಮನೆ ನಿವಾಸಿ ರಾಜು (48) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮೇ 8ರಂದು ಸಂಜೆ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





