ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಎನ್ಐಎ ಶೋಧ: ಐವರ ಬಂಧನ

ಚೆನ್ನೈ, ಮೇ 9: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧಗಳನ್ನು ನಡೆಸಿದೆ ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿರುವ ಆರೋಪದಲ್ಲಿ ಐವರನ್ನು ಬಂಧಿಸಿದೆ.
ಚೆನ್ನೈ, ಮದುರೈ, ದಿಂಡಿಗಲ್ ಮತ್ತು ತೇನಿಯ ವಿವಿಧ ನಗರಗಳಲ್ಲಿ ಶೋಧಗಳನ್ನು ನಡೆಸಲಾಯಿತು ಎಂದು ಎನ್ಐಎಯ ಮೂಲಗಳು ತಿಳಿಸಿವೆ.
ವಶಪಡಿಸಿಕೊಳ್ಳಲಾದ ವಸ್ತುಗಳು ಮತ್ತು ಕಲೆಹಾಕಲಾಗಿರುವ ಮಾಹಿತಿಗಳ ಆಧಾರದಲ್ಲಿ, ಮಂಗಳವಾರ ಮುಂಜಾನೆ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. 2022 ಸೆಪ್ಟಂಬರ್ನಲ್ಲಿ ನಡೆಸಲಾದ ದೇಶವ್ಯಾಪಿ ಶೋಧ ಕಾರ್ಯಾಚರಣೆಗಳ ಮುಂದುವರಿದ ಭಾಗವಾಗಿ ಪ್ರಸಕ್ತ ಶೋಧ ನಡೆದಿದೆ. ಅಂದಿನ ಕಾರ್ಯಾಚರಣೆಯಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ಉನ್ನತ ನಾಯಕರು ಮತ್ತು ಹಿರಿಯ ಪದಾಧಿಕಾರಿಗಳು ಸೇರಿದಂತೆ 100ಕ್ಕೂ ಅಧಿಕ ಶಂಕಿತರನ್ನು ಬಂಧಿಸಲಾಗಿತ್ತು.
Next Story





