ಕೆನಡಾದಿಂದ ಚೀನಾದ ರಾಜತಾಂತ್ರಿಕ ಉಚ್ಛಾಟನೆ

ಟೊರಂಟೊ, ಮೇ 9: ಉಯಿಗರ್ ಮುಸ್ಲಿಮರನ್ನು ಚೀನಾ ನಡೆಸಿಕೊಳ್ಳುವ ವಿಧಾನವನ್ನು ಟೀಕಿಸಿದ ಕೆನಡಾ ಸಂಸದರನ್ನು ಗುರಿಯಾಗಿಸಿಕೊಂಡ ಚೀನಾದ ರಾಜತಾಂತ್ರಿಕರನ್ನು ದೇಶದಿಂದ ಉಚ್ಛಾಟಿಸಲಾಗಿದೆ ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.
ಯಾವುದೇ ರೀತಿಯ ವಿದೇಶೀ ಹಸ್ತಕ್ಷೇಪವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ. ಕೆನಡಾದ ಈ ಕ್ರಮವನ್ನು ಖಂಡಿಸುವುದಾಗಿ ಒಟ್ಟಾವದಲ್ಲಿನ ಚೀನಾದ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ. ಇದಕ್ಕೆ ಪ್ರತಿಕ್ರಮ ತೆಗೆದುಕೊಂಡಿರುವ ಚೀನಾ, ಶಾಂಘೈಯಲ್ಲಿನ ಕೆನಡಾ ಕಾನ್ಸುಲೇಟ್ ಜನರಲ್ ಜೆನ್ನಿಫರ್ ಲಿನ್ ಲಲೋಂಡೆಯನ್ನು ಮೇ 13ರ ಒಳಗೆ ದೇಶ ಬಿಟ್ಟು ತೆರಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
Next Story