ಮುಝಫ್ಫರ್ ನಗರ ದಂಗೆ: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರನ್ನು ದೋಷಿಗಳೆಂದು ಘೋಷಿಸಿದ ಕೋರ್ಟ್

ಲಕ್ನೋ,ಮೇ 9: ಉತ್ತರ ಪ್ರದೇಶದ ಮುಝಫ್ಫರ್ ನಗರ ಜಿಲ್ಲೆಯ ನ್ಯಾಯಾಲಯವೊಂದು 2013ರ ದಂಗೆಗಳ ಸಂದರ್ಭದಲ್ಲಿ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಕ್ಕಾಗಿ ಇಬ್ಬರನ್ನು ತಪ್ಪಿತಸ್ಥರೆಂದು ಮಂಗಳವಾರ ಘೋಷಿಸಿದೆ.
ಮಹೇಶ್ವರ್ ಮತ್ತು ಸಿಕಂದರ್ ದೋಷ ನಿರ್ಣಯಕ್ಕೆ ಒಳಗಾಗಿದ್ದರೆ,ಇನ್ನೋರ್ವ ಆರೋಪಿ ಕುಲ್ದೀಪ್ ವಿಚಾರಣೆ ಸಂದರ್ಭದಲ್ಲಿ ಮೃತ ಪಟ್ಟಿದ್ದಾನೆ.
ಮುಝಫ್ಫರ್ ನಗರದಲ್ಲಿ 2013ರಲ್ಲಿ ನಡೆದಿದ್ದ ಗಲಭೆಗಳಲ್ಲಿ ಕನಿಷ್ಠ 60 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಸಾವಿರಾರು ಮುಸ್ಲಿಮ್ ಕುಟುಂಬಗಳು ಸ್ಥಳಾಂತರಗೊಂಡಿದ್ದವು. ಮುಝಫ್ಫರ್ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಹಲವಾರು ಲೈಂಗಿಕ ದೌರ್ಜನ್ಯ ಪ್ರಕರಣಗಳೂ ವರದಿಯಾಗಿದ್ದವು.
ಹಾಲಿ ಪ್ರಕರಣದಲ್ಲಿ ಏಳು ಮಹಿಳೆಯರು ತಮ್ಮ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಆರೋಪಿಸಿದ್ದರು. ಆದರೆ ಅವರ ಪೈಕಿ ಆರು ಮಹಿಳೆಯರು ನಂತರ ಬೆದರಿಕೆಗಳಿಂದಾಗಿ ಪ್ರಕರಣದಿಂದ ಹಿಂದೆ ಸರಿದಿದ್ದರು.
Next Story





