ಪಾಕ್ ಜೊತೆ ಸಂಪರ್ಕ: ಬಂಧಿತ ಡಿಆರ್ಡಿಓ ವಿಜ್ಞಾನಿ ಪ್ರದೀಪ್ ಕಸ್ಟಡಿ ಮೇ 15ರವರೆಗೆ ವಿಸ್ತರಣೆ
ಪುಣೆ,ಮೇ 9: ಶಂಕಿತ ಹನಿಟ್ರಾಪ್ ಪ್ರಕರಣದಲ್ಲಿ ಬೇಹುಗಾರಿಕೆ ಮತ್ತು ಪಾಕಿಸ್ತಾನಿ ಏಜೆಂಟ್ರೊಂದಿಗೆ ಅಕ್ರಮ ಸಂವಹನದ ಆರೋಪದಲ್ಲಿ ಕಳೆದ ವಾರ ಪುಣೆಯಲ್ಲಿ ಬಂಧಿಸಲ್ಪಟ್ಟಿರುವ ಡಿಆರ್ಡಿಓದ ವಿಜ್ಞಾನಿ ಪ್ರದೀಪ್ ಕುರುಲ್ಕರ್ (59) ಅವರ ಎಟಿಎಸ್ ಕಸ್ಟಡಿ ಅವಧಿಯನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ.
ಮಂಗಳವಾರ ಕುರುಲ್ಕರ್ ಕಸ್ಟಡಿ ಅವಧಿಯ ವಿಸ್ತರಣೆಯನ್ನು ಕೋರಿದ ಮಹಾರಾಷ್ಟ್ರ ಎಟಿಎಸ್,ಕುರುಲ್ಕರ್ ಅವರಿಂದ ವಶಪಡಿಸಿಕೊಳ್ಳಲಾಗಿರುವ ವಿದ್ಯುನ್ಮಾನ ಸಾಧನಗಳಿಂದ ಪಡೆಯಲಾಗಿರುವ ಡೇಟಾದ ವಿಧಿವಿಜ್ಞಾನ ವಿಶ್ಲೇಷಣೆಯ ವರದಿಯನ್ನು ತಾನು ಪಡೆದುಕೊಂಡಿದ್ದು,ಡೇಟಾವನ್ನು ಇನ್ನಷ್ಟು ವಿಶ್ಲೇಷಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತು.
ಡಿಆರ್ಡಿಓದ ಜಾಗ್ರತ ಮತ್ತು ಭದ್ರತಾ ವಿಭಾಗದ ಹಿರಿಯ ಅಧಿಕಾರಿಯೋರ್ವರ ದೂರಿನ ಮೇರೆಗೆ ಕುರುಲ್ಕರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದ ಎಟಿಎಸ್ ಮೇ 3ರಂದು ಸಂಜೆ ಅವರನ್ನು ಬಂಧಿಸಿತ್ತು. ಪುಣೆ ನ್ಯಾಯಾಲಯವು ಅವರನ್ನು ಮಂಗಳವಾರದವರೆಗೆ ಎಟಿಎಸ್ ಕಸ್ಟಡಿಗೆ ನೀಡಿತ್ತು.
ಕುರುಲ್ಕರ್ ಬಂಧನದ ಬೆನ್ನಲ್ಲೇ ಡಿಆರ್ಡಿಒ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.